ETV Bharat / state

ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ-ಮಗಳಿಗೆ ಕೊರೊನಾ ದೃಢ

author img

By

Published : Jul 14, 2020, 9:51 AM IST

Updated : Jul 14, 2020, 10:35 AM IST

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿಯವರ ಪತ್ನಿ ಜಿಲ್ಲಾ ಪಂಚಾಯತ್​​ ಸದಸ್ಯೆ ಚಂಚಲ ಕುಮಾರಸ್ವಾಮಿ, ಮಗಳು ಹಾಗೂ ಕಾರಿನ ಡ್ರೈವರ್​​ಗೆ ಕೊರೊನಾ ಸೋಂಕು ದೃಢಪಟ್ಟಿದೆ.

Coroner's Positive for JDS President's Wife and Daughter
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿಯವರ ಪತ್ನಿ ಚಂಚಲ ಕುಮಾರಸ್ವಾಮಿ

ಸಕಲೇಶಪುರ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿಯವರ ಪತ್ನಿ ಜಿಲ್ಲಾ ಪಂಚಾಯತ್​ ಸದಸ್ಯೆ ಚಂಚಲಾ ಕುಮಾರಸ್ವಾಮಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕಳೆದ ವಾರ ಆಲೂರಿನಲ್ಲಿ ಶಾಸಕರು ಹಾಗೂ ಅವರ ಆಪ್ತ ಸಹಾಯಕ, ಗನ್ ಮ್ಯಾನ್ ಸೇರಿದಂತೆ ಒಟ್ಟು 11 ಜನರ ಗಂಟಲು ದ್ರವವನ್ನು ಪಡೆದುಕೊಂಡು ಟೆಸ್ಟಿಂಗ್​ಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಬೆಳಗೋಡು ಜಿಲ್ಲಾ ಪಂಚಾಯತ್​​ ಕ್ಷೇತ್ರದ ಸದಸ್ಯೆ ಚಂಚಲ ಕುಮಾರಸ್ವಾಮಿ, ಮಗಳು ಹಾಗೂ ಕಾರಿನ ಡ್ರೈವರ್​​ಗೆ ಪಾಸಿಟಿವ್ ಎಂದು ವರದಿ ಬಂದಿದೆ. ಸದ್ಯ ಜಿಲ್ಲಾ ಪಂಚಾಯತ್​​ ಸದಸ್ಯರು ಮಂಡ್ಯ ಜಿಲ್ಲೆಯ ತಮ್ಮ ಮಗಳ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕ ಹಾಸನ ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿದ್ದಾರೆ. ಸದಸ್ಯೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಾಸಕರು ಸೇರಿದಂತೆ ಅವರ ಎಲ್ಲಾ ಸಿಬ್ಬಂದಿ ವರ್ಗದವರು ಪ್ರತ್ಯೇಕ ಮನೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ ಮೊದಲ ವರದಿಯಲ್ಲಿ ನನಗೆ ಪಾಸಿಟಿವ್ ಕಂಡು ಬಂದಿಲ್ಲ. ಮುನ್ನೆಚ್ಚರಿಕೆಯಾಗಿ ಬೇರೆ ಮನೆಗೆ ಸ್ಥಳಂತಾರಗೊಂಡಿದ್ದೇನೆ‌. ಒಂದು ವಾರ ಸಾರ್ವಜನಿಕ ಸಂಪರ್ಕದಿಂದ ದೂರವಿದ್ದು, ಹೋಂ ಕ್ವಾರಂಟೈನ್​ನಲ್ಲಿ ಇರಲು ತೀರ್ಮಾನಿಸಿದ್ದೇನೆ‌. ಸಾರ್ವಜನಿಕರು ಪಕ್ಷದ ಕಾರ್ಯಕರ್ತರು ಅಗತ್ಯವಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಮೊದಲ‌ ಹಂತದ ಲಾಕ್​ಡೌನ್ ಸಂದರ್ಭದಲ್ಲಿ ಖುದ್ದು ಶಾಸಕರ ಪತ್ನಿ ಜಿಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ಬಹುತೇಕ ಅಗತ್ಯವಿರುವವರಿಗೆ ದಿನಸಿ ಕಿಟ್ ವಿತರಿಸಿದ್ದರು. ಇದೀಗ ಇವರಿಗೆ ಕೊರೊನಾ ಬಂದಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Last Updated : Jul 14, 2020, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.