ಸಕಲೇಶಪುರ(ಹಾಸನ) : ತಾಲೂಕಿನ ಕೆಲವು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ಸುಮಾರು 80 ಜನ ಕೂಲಿ ಕಾರ್ಮಿಕರನ್ನ ತಾಲೂಕು ಆಡಳಿತ 3 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಳುಹಿಸಿಕೊಟ್ಟಿದೆ.
ತಾಲೂಕಿನಲ್ಲಿ ಸುಮಾರು 1500 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರಪ್ರದೇಶ,ಅಸ್ಸೋಂ,ತಮಿಳುನಾಡು,ಕೇರಳ,ಪಶ್ಚಿಮ ಬಂಗಾಳ,ತೆಲಂಗಾಣ ಸೇರಿ ವಿವಿಧೆಡೆ ಹೋಗಲು ಹೆಸರು ನೋಂದಾಯಿಸಿದ್ದಾರೆ. ಹೊರ ರಾಜ್ಯಗಳಿಗೆ ಹೋಗುವವರು ಸ್ವತ: ಹಣವನ್ನ ಭರಿಸಬೇಕಾಗಿದೆ. ತಮಿಳುನಾಡಿನ ಸೇಲಂಗೆ ಹೊರಟ ಪ್ರತಿ ಕಾರ್ಮಿಕರಿಗೆ ಸುಮಾರು 2,250 ರೂ.ಗಳು ವೆಚ್ಚವಾಗಿದೆ.
ಸರ್ಕಾರ ಕೇವಲ 3 ದಿನಗಳ ಅವಧಿಗೆ ಮಾತ್ರ ಹೊರ ರಾಜ್ಯದ ಕಾರ್ಮಿಕರನ್ನ ಉಚಿತವಾಗಿ ಕಳುಹಿಸಿಕೊಟ್ಟಿದೆ. ಇದೀಗ ಹೊರ ರಾಜ್ಯದ ಕಾರ್ಮಿಕರು ಅಲ್ಪಸ್ವಲ್ಪ ದುಡಿದು ಉಳಿಸಿಕೊಂಡ ಹಣದಲ್ಲೇ ತಮ್ಮ ಊರುಗಳಿಗೆ ಹೋಗಬೇಕಾಗಿದೆ.