ETV Bharat / state

ಅರಸೀಕೆರೆಯಲ್ಲಿ ರಸ್ತೆ ಅಪಘಾತ : ಔಷಧಿ ತರಲು ಹೋಗಿದ್ದ ಅಪ್ಪ-ಮಗಳು ಸಾವು

ಸ್ಥಳಕ್ಕೆ ಗಂಡಸಿ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಅರಸೀಕೆರೆಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಅಪಘಾತವೆಸಗಿದ ವಾಹನ ವಶಪಡಿಸಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ..

road-accident
ರಸ್ತೆ ಅಪಘಾತ
author img

By

Published : Oct 16, 2021, 10:39 PM IST

Updated : Oct 16, 2021, 11:39 PM IST

ಹಾಸನ : ಔಷಧಿ ತರಲೆಂದು ಹೋಗುತ್ತಿದ್ದ ವೇಳೆ ಎದುರಿಗೆ ಬಂದ ಕಾರು ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಅಪ್ಪ ಮತ್ತು ಮಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕುಮಾರ್ (35) ಹಾಗೂ ಮೋಕ್ಷ (13) ಸಾವಿಗೀಡಾದ ಮೃತ ಅಪ್ಪ-ಮಗಳು. ಮಧುಮೇಹದಿಂದ ಬಳಲುತ್ತಿದ್ದ ಕುಮಾರ್ ಔಷಧಿ ತರಲೆಂದು ಸ್ವಗ್ರಾಮ ಮಧುಡಿ ಸಿದ್ದಾಪುರದಿಂದ ತನ್ನ ಮಗಳನ್ನ ಜೊತೆ ಬೈಕ್​ನಲ್ಲಿ ಗಂಡಸಿಗೆ ಹೋಗುತ್ತಿದ್ದರು. ಈ ವೇಳೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಗಂಡಸಿ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಅರಸೀಕೆರೆಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಅಪಘಾತವೆಸಗಿದ ವಾಹನ ವಶಪಡಿಸಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು, ಈ ವಾಹನ ದಲಿತ ಸಂಘರ್ಷ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾಗರಹಳ್ಳಿ ಚಂದ್ರುಗೆ ಸೇರಿದ್ದು ಎಂದು ತಿಳಿದು ಬಂದಿದೆ. ವಾಹನ ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Last Updated : Oct 16, 2021, 11:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.