ಹಾಸನ: ಹಾಸನಾಂಬೆಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿ ಪ್ರವೇಶ ದ್ವಾರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಬೆಳಗ್ಗೆ 5.30 ರಿಂದ ಊಟ, ನೀರಿಲ್ಲದೆ ದೇಗುಲದಲ್ಲಿ ಅರ್ಚಕರ ತಂಡ ಪೂಜೆ ಸಲ್ಲಿಸುತ್ತಿದೆ. ಅವರನ್ನು ಹೊರಗೆ ಕಳಿಸಿ ಮತ್ತೊಂದು ತಂಡ ಪೂಜೆ ಸಲ್ಲಿಸುವುದಕ್ಕೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂದಿದೆ. ಆದರೆ, ಅಧಿಕಾರಿಗಳು ದೇಗುಲದ ಒಳಗೆ ಬಿಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗಂಟೆ ಗಟ್ಟಲೆ ಕಾಯ್ದರೂ ಒಳ ಬಿಡುತ್ತಿಲ್ಲ. ನಿತ್ಯವೂ ಇದೇ ರೀತಿ ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಮುಖ್ಯದ್ವಾರದಲ್ಲಿ ಬೀಗ ಹಾಕಿ ಕಣ್ಮರೆಯಾಗಿದ್ದಾರೆ. ಈ ಕುರಿತು ಪ್ರಶ್ನಿಸಲು ತಹಶೀಲ್ದಾರ್ ನಂಬರ್ಗೆ ಕಾಲ್ ಮಾಡಿದ್ರೆ, ಅವರು ಪೋನ್ ಸ್ವೀಕರಿಸುತ್ತಿಲ್ಲ. ದೃಶ್ಯ ಹಾಗೂ ಪತ್ರಿಕಾ ಮಾದ್ಯಮದವರೂ ಯಾವುದೇ ಸಂದರ್ಭದಲ್ಲಿ ಬಂದು ಚಿತ್ರೀಕರಿಸಬಹುದು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ರೆವಿನ್ಯೂ ಇನ್ಸ್ಪೆಕ್ಟರ್ ಕೇಳಿದ್ರೆ ಉಡಾಫೇ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಧ್ಯಾಹ್ನ ಒಂದು ಘಂಟೆಗೆ ಬಾಗಿಲು ಹಾಕಿ ಒಳ ಸೇರಿರುವ ಸಿಬ್ಬಂದಿಗಳು ಬೀಗ ತೆಗೆಯುವಂತೆ ರೆವಿನ್ಯೂ ಇನ್ಸ್ಪೆಕ್ಟರ್ ಇಂದುಶೇಖರ್ ಅವರನ್ನು ಕೇಳಿದ್ರೆ, ಎಸಿ ಸಾಹೇಬರನ್ನ ಕೇಳಿ ಅಂತಾ ನಿರುತ್ತರ ನೀಡುತ್ತಾರೆ ಎಂದು ದೂರಿದ್ದಾರೆ.