ETV Bharat / state

ಹೇಮಾವತಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ಅವಕಾಶ ಕೊಡಿ: ಮರೀಜೋಸೆಪ್

ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಅಲೆಮಾರಿ ಸಮುದಾಯಗಳ ಶಿಳ್ಳೇಕ್ಯಾತ, ಬೆಸ್ತರು ಹಾಗೂ ಗ್ರಾಮದ ಬಡ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆಗೆ ಅವಕಾಶ ಕೊಡಿ ಎಂದು ಮರೀಜೋಸೆಪ್ ಮನವಿ ಮಾಡಿಕೊಂಡರು.

author img

By

Published : Jun 19, 2020, 6:18 PM IST

Request that fishing be allowed
ಹೇಮಾವತಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ಅವಕಾಶ ಕೊಡಿ : ಮರೀಜೋಸೆಪ್

ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಮಾಡಲು ಅವಕಾಶ ನೀಡುವಂತೆ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾಧ್ಯಕ್ಷ ಮರೀಜೋಸೆಪ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಹಲವಾರು ವರ್ಷಗಳಿಂದ ಅಲೆಮಾರಿ ಸಮುದಾಯಗಳ ಶಿಳ್ಳೇಕ್ಯಾತ, ಬೆಸ್ತರು ಹಾಗೂ ಗ್ರಾಮದ ಬಡ ಮೀನುಗಾರರ ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡು​ ಬದುಕು ಸಾಗಿಸುತ್ತಾ ಬಂದಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಎರಡು ತಿಂಗಳು ಕಾಲ ಮೀನುಗಾರಿಕೆ ಮಾಡಲು ಅವಕಾಶ ಕೊಡಲಿಲ್ಲ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ಇಲಾಖೆಯು ತಮ್ಮ ನಿಯಮದ ಪ್ರಕಾರ ಎರಡು ತಿಂಗಳ ಮೀನು ಹಿಡಿಯುವುದಕ್ಕೆ ನಿರ್ಬಂಧ ಹೇರಿದ್ದರಿಂದ ಅಲೆಮಾರಿ ಮೀನುಗಾರರ ಬದುಕು ಚಿಂತಾಜನಕವಾಗಿದೆ ಎಂದು ಅಳಲು ತೋಡಿಕೊಂಡರು.

ಮೀನುಗಾರಿಕೆಗೆ ಅವಕಾಶ ಕೊಡಿ ಎಂದ ಮರೀಜೋಸೆಪ್​

ಜಿಲ್ಲಾಡಳಿತವು ಈ ಬಗ್ಗೆ ಗಮನ ನೀಡಿ ಎರಡು ತಿಂಗಳ ನಿಯಮ ಸಡಿಲಿಸಿ ಅಲೆಮಾರಿ ಸಮುದಾಯದವರಿಗೆ ಮೀನುಗಾರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸರಕಾರವು ಸಮುದ್ರದ ಮೀನುಗಾರರಿಗೆ ನೀಡುತ್ತಿರುವ ಕಿಟ್, ಪ್ಯಾಕೇಜುಗಳು ನದಿ ತೀರದ ಮೀನುಗಾರಿಕೆ ಕುಟುಂಬಗಳಿಗೆ ಸಿಗುವುದಿಲ್ಲ. ಇವರಿಗೂ ಕೂಡ ಕಿಟ್​​ ನೀಡಬೇಕು. ಲಾಕ್ ಡೌನ್ ವೇಳೆಯ ತಿಂಗಳುಗಳಲ್ಲಿ ಹಲವು ಅಲೆಮಾರಿ ಕುಟುಂಬಗಳಿಗೆ ಪಡಿತರ ಲಭ್ಯವಾಗಿರುವುದಿಲ್ಲ. ಹಾಗೂ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನುಗಾರಿಕೆ ಮಾಡುವ ಎಲ್ಲಾ ಮೀನುಗಾರರ ಕುಟುಂಬಗಳಿಗೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಕಾರದ ನಿಯಮ ಸಡಿಲಿಸಿ ಮೀನುಗಾರಿಕೆಗೆ ಅವಕಾಶ ನೀಡಬೇಕೆಂದು ಕೇಳಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.