ETV Bharat / state

2 ತಿಂಗಳ ಪಡಿತರ ವಿತರಿಸಿದ ಶಾಸಕ ಎಚ್​.ಕೆ.ಕುಮಾರಸ್ವಾಮಿ - ration Distribution of lockdown effect

ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಾಸನದ ಸಕಲೇಶಪುರ ತಾಲೂಕಿನ ಅಗ್ರಹಾರ ಮತ್ತು ಕುಡುಗರಹಳ್ಳಿ ಬಡಾವಣೆಗಳ ಜನರಿಗೆ ಎರಡು ತಿಂಗಳ ಪಡಿತರ ವಿತರಣೆ ಮಾಡಲಾಯಿತು.

ration Distribution of lockdown effect
ಎರಡು ತಿಂಗಳ ಪಡಿತರ ವಿತರಿಸಿದ ಶಾಸಕ ಎಚ್​.ಕೆ.ಕುಮಾರಸ್ವಾಮಿ
author img

By

Published : Apr 7, 2020, 7:38 PM IST

ಸಕಲೇಶಪುರ (ಹಾಸನ): ಪಟ್ಟಣದ ಅಗ್ರಹಾರ ಹಾಗೂ ಕುಡುಗರಹಳ್ಳಿ ಬಡಾವಣೆಯ ಪಡಿತರ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಅಕ್ಕಿ ಹಾಗೂ ಗೋಧಿಯನ್ನು ಎಚ್​​.ಕೆ.ಕುಮಾರಸ್ವಾಮಿ ಅವರು ವಿತರಿಸಿದರು.

ಸರ್ಕಾರ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ನೀಡಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಡವರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಗುಣಮಟ್ಟ ಅಕ್ಕಿ ಹಾಗೂ ಗೋಧಿಯನ್ನು ಸಾರ್ವಜನಿಕರಿಗಾಗಿ ವಿತರಿಸುತ್ತಿದೆ ಎಂದರು.

ಲಾಕ್​ಡೌನ್​ಗೆ ಸಹಕಾರ ನೀಡದಿದ್ದರೆ ಅದನ್ನು ಮತ್ತೆ ಮುಂದುವರೆಸಬೇಕಾಗುತ್ತದೆ. ಹೀಗಾಗಿ ಎಲ್ಲರೂ ಲಾಕ್​​​ಡೌನ್​​ಗೆ ಬೆಂಬಲ ನೀಡಬೇಕು.​​ ಪಡಿತರದ ಜೊತೆಗೆ ಹಾಲನ್ನು ನೀಡಲಾಗುತ್ತಿದೆ. ಒಂದೆರಡು ಬಡಾವಣೆಗಳಲ್ಲಿ ಮಾತ್ರವಲ್ಲದೇ, ಎಲ್ಲ ಬಡಾವಣೆಗಳ ಬಡವರಿಗೂ ಹಾಲು ಹಂಚಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.