ETV Bharat / state

ಮೆಡಿಸನ್ ಕಂಪನಿಯಲ್ಲಿ ಏಕಾಏಕಿ 15 ಜನ ಕೆಲಸಗಾರರ ವಜಾ...ಕಾರ್ಮಿಕರಿಂದ ಪ್ರತಿಭಟನೆ - dc office

ಅಲ್ಟ್ರಾ ಲ್ಯಾಬೊರೇಟರೀಸ್ ಪ್ರೈ.ಲಿ ಎಂಬ ಮೆಡಿಸನ್ ಕಂಪನಿಯಲ್ಲಿ ಏಕಾಏಕಿ 15 ಜನ ಕೆಲಸಗಾರರನ್ನು ತೆಗೆದು ಹಾಕಿರುವುದನ್ನು ಖಂಡಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

protest-by-workers-in-hassan
protest-by-workers-in-hassan
author img

By

Published : Jan 22, 2020, 6:41 PM IST

ಹಾಸನ: ಅಲ್ಟ್ರಾ ಲ್ಯಾಬೊರೇಟರೀಸ್ ಪ್ರೈ.ಲಿ ಎಂಬ ಮೆಡಿಸನ್ ಕಂಪನಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದ 15 ಜನ ಕೆಲಸಗಾರರು ತೆಗೆದು ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

ಕಾರ್ಮಿಕರಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಛೇರಿ ಮುಂದೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ನಾವು ಕೆಲಸ ನಿರ್ವಹಿಸುವ ಕಂಪನಿಯಲ್ಲಿ ದಾಖಲಾತಿ ಪ್ರಕಾರ, ಕೆಲಸ ಮಾಡುವವರಿಗೆ ಖಾತರಿ ಪತ್ರ ನೀಡಿರುವ ಸವಲತ್ತುಗಳನ್ನು ನೀಡಿ ಎಂದು ಕೇಳಿದಕ್ಕೆ ಮತ್ತು ಯೂನಿಯನ್ ನಿರ್ಮಿಸಿದಕ್ಕೆ, ಯಾವುದೇ ನೋಟಿಸ್​ ಆಗಾಲಿ, ಕಾರಣವಾಗಲಿ ನೀಡದೇ ಏಕ ಏಕಿ ಪ್ಯಾಕ್ಟರಿ ಗೇಟ್‌ಗೆ ಕೆಲಸದಿಂದ ತೆಗೆದು ಹಾಕಲಾಗಿರುವ 15 ಕಾರ್ಮಿಕರ ಹೆಸರಿನ ಪಟ್ಟಿ ಅಂಟಿಸಿ ಕೆಲಸದಿಂದ ತೆಗೆದಿರುವುದ ಕುರಿತು ಪ್ರತಿಭಟನೆ ಮಾಡಿದರು.

ಈ ಕುರಿರು ಮಾತಾಡಿದ ಕಾರ್ಮಿಕ ಧನಪಾಲ್​, ಕನ್ನಡಿಗರನ್ನು ಹೊರಗೆ ಹಾಕಿ ಅಸ್ಸಾಂ, ಕೇರಳ ಜನರನ್ನು ಕಾರಿನಲ್ಲಿ ಕರೆತಂದು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನವಾಗಿರುವ ಕಾನೂನನ್ನು ಸುಟ್ಟಾಕಲು ಹೊರಟಿದ್ದಾರೆ. ಈ ಕಂಪನಿಯ ಮಾಲೀಕರು ಒಳ್ಳೆಯವರು, ಆದರೆ ನಿರ್ವಹಣೆ ಮಾಡುತ್ತಿರುವ ಹೆಚ್.ಆರ್. ವಿಭಾಗದ ಸುರೇಶ್‌ರವರ ದಬ್ಬಾಳಿಕೆಗೆ ಕನ್ನಡಿಗರು ಕೆಲಸ ಕಳೆದುಕೊಳ್ಳಬೇಕಾಗಿದೆ. ಈ ಕೆಲಸ ನಂಬಿ ಕುಟುಂಬ ನಿರ್ವಹಣೆ ಮಾಡಲಾಗುತ್ತಿದೆ. ಈಗ ಕೆಲಸ ಇಲ್ಲದೇ ಇರುವುದರಿಂದ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

ನಾವು ಅಲ್ಟ್ರಾ ಯೂನಿಯನ್ ಸಂಘ ನಿರ್ಮಿಸಿದ ಇಂದೇ ಉದ್ದೇಶದಿಂದ 15 ಜನ ಕನ್ನಡಿಗ ಕೆಲಸಗಾರರನ್ನು ಹೊರ ಹಾಕಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಸರಿಪಡಿಸಿ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

Intro:ಹಾಸನ: ಕೆಲಸಗಾರರ ಯೂನಿಯನ್ ಮಾಡಲಾದ ಒಂದೆ ಕಾರಣಕ್ಕೆ ಅಲ್ಟ್ರಾ ಲ್ಯಾಬೊರೇಟರೀಸ್ ಪ್ರೈ.ಲಿ ಎಂಬ ಮೆಡಿಸನ್ ಕಂಪನಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ೧೫ ಜನ ಕೆಲಸಗಾರರು ತೆಗೆದು ಹಾಕಿರುವುದನ್ನು ಖಂಡಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ದಾಖಲಾತಿ ಪ್ರಕಾರ ಕೆಲಸ ಮಾಡುವವರಿಗೆ ಖಾತರಿ ಪತ್ರ ನೀಡಿರುವ ದಾಖಲಾತಿ ಪ್ರಕಾರ ಸವಲತ್ತುಗಳನ್ನು ಕೇಳಿದ ಕಾರಣಕ್ಕೆ ಮತ್ತು ಯೂನಿಯನ್ ನಿರ್ಮಿಸಿದಕ್ಕೆ ಯಾವುದೇ ನೋಟಿಸ್, ಕಾರಣ ನೀಡದೇ ಏಕ ಏಕಿ ಪ್ಯಾಕ್ಟರಿ ಗೇಟ್‌ಗೆ ಕೆಲಸದಿಂದ ತೆಗೆದು ಹಾಕಲಾಗಿರುವ ಪಟ್ಟಿ ಅಂಟಿಸಿ ಕೆಲಸದಿಂದ ತೆಗೆದಿರುವುದಾಗಿ ಹೇಳಿದ್ದಾರೆ. ಕನ್ನಡಿಗರನ್ನು ಹೊರಗೆ ಹಾಕಿ ಅಸ್ಸಾಂ, ಕೇರಳ ಜನರನ್ನು ಕಾರಿನಲ್ಲಿ ಕರೆತಂದು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸಂವಿಧಾನವಾಗಿರುವ ಕಾನೂನನ್ನು ಸುಟ್ಟಾಕಲು ಹೊರಟಿದ್ದಾರೆ. ಈ ಕಂಪನಿಯ ಮಾಲೀಕರು ಒಳ್ಳೆಯವರು, ಆದರೇ ನಿರ್ವಹಣೆ ಮಾಡುತ್ತಿರುವ ಹೆಚ್.ಆರ್. ವಿಭಾಗದ ಸುರೇಶ್‌ರವರ ದಬ್ಬಾಳಿಕೆಗೆ ಕನ್ನಡಿಗರು ಕೆಲಸ ಕಳೆದುಕೊಳ್ಳಬೇಕಾಗಿದೆ. ಈ ಕೆಲಸ ನಂಬಿ ಕುಟುಂಬ ನಿರ್ವಹಣೆ ಮಾಡಲಾಗುತ್ತಿದೆ. ಈಗ ಕೆಲಸ ಇಲ್ಲದೇ ಇರುವುದರಿಂದ ಜೀವನ ನಡೆಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.
ಈ ಭೂಮಿ ಮೇಲೆ ಇರುವ ಸಾವಿರಾರು ಸಂಘದಲ್ಲಿ ನಮ್ಮದು ಒಂದಾಗಿದೆ. ನಾವು ಅಲ್ಟ್ರಾ ಯೂನಿಯನ್ ಸಂಘ ಮಾಡಿದ ಒಂದೆ ಉದ್ದೇಶಕ್ಕೆ ಈತರ ೧೫ ಜನ ಕನ್ನಡಿಗ ಕೆಲಸಗಾರರನ್ನು ಹೊರ ಹಾಕಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಸರಿಪಡಿಸಿ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ದೇಶದಲ್ಲಿ ದಿನೆ ದಿನೆ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದ್ದು, ಹಾಗೂ ಇನ್ನಿತರೆ ಪೆಟ್ರೋಲ್, ಡಿಸೇಲ್, ಮನೆ ಬಾಡಿಗೆ, ಬಸ್ಸಿನ ದರ, ಶಾಲಾ-ಕಾಲೇಜುಗಳ ಶುಲ್ಕ ಸೇರಿದಂತೆ ಇತರೆ ದರಗಳು ಹೆಚ್ಚಾಗುತ್ತಿದೆ. ಸಾಮಾನ್ಯ ವರ್ಗದ ಜನರು ಬದುಕಲು ಪರಿತಪಿಸುತ್ತಿದ್ದಾರೆ ಎಂದರು.
ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವ ನೌಕರರುಗಳಿಗೆ ಕನಿಷ್ಠ ವೇತನ ೧೫ ಸಾವಿರ ರೂಗಳನ್ನು ನಿಗದಿಪಡಿಸಬೇಕು. ಹಾಗೂ ನಗರ ಮತ್ತು ತಾಲೂಕಿನಾದಂತ ಇರುವ ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ ಸ್ಥಳೀಯರಿಗೆ ಪ್ರಥಮ ಆಧ್ಯತೆಯನ್ನು ನೀಡಬೇಕೆಂದು ಆಗ್ರಹಿಸಿದರು. ಸ್ಥಳೀಯರಿಗೆ ಕೆಲಸ ಕೊಡುವುದರಿಂದ ಎಷ್ಟೊ ಉದ್ಯೋಗದ ಸಮಸ್ಯೆ ಕೂಡ ಬಗೆಹರಿಯುತ್ತದೆ ಎಂದು ಜಿಲ್ಲಾಡಳಿತದ ಮುಂದೆ ತಮ್ಮ ಅಳಲು ತೋಡಿಕೊಂಡರು.

ಬೈಟ್ :ಧನಪಾಲ್, ಕಾರ್ಮಿಕ.
Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.