ETV Bharat / state

ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಪ್ರತಿಭಟನೆ - davanagere latest news

ಲಾಕ್​ಡೌನ್​ನಿಂದಾಗಿ ಈಗಾಗಲೇ ಆರ್ಥಿಕ ಹೊಡೆತಗಳಿಗೆ ಒಳಗಾಗಿರುವ ಜನರ ಜೀವನವನ್ನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮೂಲಕ ಸಂಪೂರ್ಣವಾಗಿ ಧ್ವಂಸ ಮಾಡಲು ಮೋದಿ ಸರ್ಕಾರ ಹೊರಟಿದೆ ಎಂದು ಜಿಲ್ಲಾ ಸಿಪಿಐಎಂ ಮುಖಂಡ ಧರ್ಮೇಶ್ ಆರೋಪಿಸಿದ್ದಾರೆ.

Protest by CPIM condemns failure of Modi administration
ಮೋದಿ ಆಡಳಿತದ ವೈಫಲ್ಯ ಖಂಡಿಸಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ
author img

By

Published : Jun 29, 2020, 9:38 PM IST

ಹಾಸನ: ದೇಶದ ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಫಲ್ಯ ಖಂಡಿಸಿ ನಗರದ ಹೇಮಾವತಿ ಪ್ರತಿಮೆ ಎದುರು ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.​ ​ ​

ಈ ವೇಳೆ ಮಾತನಾಡಿದ ಜಿಲ್ಲಾ ಸಿಪಿಐಎಂ ಮುಖಂಡ ಧರ್ಮೇಶ್, ಲಾಕ್​ಡೌನ್​ನಿಂದಾಗಿ ಈಗಾಗಲೇ ಆರ್ಥಿಕ ಹೊಡೆತಗಳಿಗೆ ಒಳಗಾಗಿರುವ ಜನರ ಜೀವನವನ್ನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮೂಲಕ ಸಂಪೂರ್ಣವಾಗಿ ಧ್ವಂಸ ಮಾಡಲು ಮೋದಿ ಸರ್ಕಾರ ಹೊರಟಿದೆ. ತೈಲ ಬೆಲೆಯನ್ನ ನಿರಂತರವಾಗಿ ಏರಿಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಪೆಟ್ರೋಲ್ ಬೆಲೆಯಲ್ಲಿ 7.97 ರೂ. ಏರಿಕೆಯಾಗಿದೆ. ಡಿಸೇಲ್​ನಲ್ಲಿ 8.44 ರೂ. ಏರಿಕೆಯಾಗಿದ್ದು, ಇದು ಕೋಟ್ಯಂತರ ಜನಗಳ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ. ಮೋದಿ ಸರ್ಕಾರ ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸಲು ಕೂಡಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕಗಳನ್ನ ಇಳಿಸಬೇಕು ಎಂದು ಆಗ್ರಹಿಸಿದರು.​

​ಕೊರೊನಾ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲವೆಂದು ಹೇಳಿ ಖಾಸಗಿ ಆಸ್ಪತ್ರೆಗಳನ್ನ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಕೋವಿಡ್-19 ಚಿಕಿತ್ಸೆಗಾಗಿ ನಿಗದಿಪಡಿಸಿರುವ ಖಾಸಗಿ ಸೇವೆಯ ಶುಲ್ಕ ಅಧಿಕವಾಗಿದೆ. ಇದು ವಿಮಾ ವ್ಯಾಪ್ತಿಯಲ್ಲಿಲ್ಲದ ಕುಟುಂಬಗಳಿಗೆ ಮರಣ ಶಾಸನವಾಗಲಿದೆ. ಕೋವಿಡ್​-19 ಸಮುದಾಯದ ಮಟ್ಟಕ್ಕೆ ಹರಡುತ್ತಿರುವಾಗ ಇಂತಹ ಕುಟುಂಬಗಳು ತಮ್ಮ ಕುಟುಂಬಗಳ ರಕ್ಷಣೆಗಾಗಿ ಕನಿಷ್ಠ 20 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಇದು ರಾಜ್ಯದ ಶೇ. 65ರಷ್ಟು ಕುಟುಂಬಗಳಿಗೆ ಅತ್ಯಂತ ದುಬಾರಿಯಾಗಲಿದೆ.

ಅಷ್ಟು ಮೊತ್ತವನ್ನು ವ್ಯಯಿಸಲಾಗದೇ ಕೆಲ ಕುಟುಂಬಗಳು ಸಾವಿಗೆ ಶರಣಾಗುವ ಸಂಭವಗಳು ಹೆಚ್ಚಾಗಲಿವೆ. ಇದು ಸರ್ಕಾರ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪಲಾಯನವಾಗಿದೆ. ಸರ್ಕಾರವೇ ಕೋವಿಡ್-19 ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.