ETV Bharat / state

ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಸೂಕ್ತ ಕ್ರಮ- ಜಿಲ್ಲಾಧಿಕಾರಿ ಆರ್ ಗಿರೀಶ್ ಭರವಸೆ

ಕೋವಿಡ್‌ನಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿರುವುದು ಶ್ಲಾಘನಾರ್ಹ. ಸಮಾಜದ ಆರೋಗ್ಯ ಕಾಪಾಡುವುದರ ಜೊತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಶುಚಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು..

Hassan
ಪೌರಕಾರ್ಮಿರ ದಿನಾಚರಣೆ
author img

By

Published : Sep 23, 2020, 8:24 PM IST

ಹಾಸನ : ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು. ನಗರದ ನಗರಸಭಾ ಕುವೆಂಪು ಸಂಭಾಂಗಣದಲ್ಲಿ ನಗರಸಭೆ ಹಾಗೂ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ಜಮೀನು ವಿವಾದದ ಬಗ್ಗೆ ಆಯುಕ್ತರೊಂದಿಗೆ ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆಹರಿಸಿ ಅವರಿಗೆ ಮನೆ ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪೌರಕಾರ್ಮಿಕರ ದಿನಾಚರಣೆ..

ಸುತ್ತಮುತ್ತಲ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ನಾವು ಶುದ್ಧವಾಗಿದ್ದರೆ ನಮ್ಮ ಪರಿಸರ ಶುದ್ಧವಾಗಿಟ್ಟುಕೊಂಡರೆ ಅದು ದೇವರಿಗೆ ಹತ್ತಿರವಾದಂತೆ ಎಂಬ ಗಾಂಧೀಜಿ ಮಾತಿನಂತೆ ಪ್ರತಿಯೊಬ್ಬರು ಸ್ವಚ್ಛತೆಗೆ ಒತ್ತು ನೀಡಬೇಕು ಎಂದರು.

ಕೋವಿಡ್‌ನಂತಹ ಸಂದರ್ಭದಲ್ಲಿ ಪೌರಕಾರ್ಮಿಕರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿರುವುದು ಶ್ಲಾಘನಾರ್ಹ. ಸಮಾಜದ ಆರೋಗ್ಯ ಕಾಪಾಡುವುದರ ಜೊತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಶುಚಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಿ ಡಿ ಜಗದೀಶ್, ಆಯುಕ್ತ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಶಂಕರ್, ಇಂಜಿನಿಯರ್ ಕವಿತಾ, ಪ್ರವೀಣ್, ಸುಜಾತ, ಆರೋಗ್ಯ ನಿರೀಕ್ಷರಾದ ಪ್ರಸಾದ್ ಸೇರಿ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.