ETV Bharat / state

ಬೊಮ್ಮಾಯಿ ಮೊದಲ ಬಾರಿ MLC ಆಗಿದ್ದಾಗ ಪ್ರಜ್ವಲ್ ರೇವಣ್ಣ ಹುಟ್ಟಿರಲಿಲ್ಲ: ಪ್ರೀತಂ ಗೌಡ - Hasana MLA Pritham gowda

ಬಸವರಾಜ ಬೊಮ್ಮಾಯಿ ಅವರು ಶಾಸಕರಾದಾಗ ನಮ್ಮ ಸಂಸದರಾಗಿರುವ ಪ್ರಜ್ವಲ್​ರವರು ಹುಟ್ಟೇ ಇರಲಿಲ್ಲ. ಎಸ್.ಆರ್ ಬೊಮ್ಮಾಯಿ ಅವರಿಗಿಂತ ದೇವೇಗೌಡರು ಕಿರಿಯರು. ಹಾಗಂತ ದೇವೇಗೌಡರು ಬೊಮ್ಮಾಯಿ ಗರಡಿಯಲ್ಲಿ ಬೆಳೆದ್ರು ಅಂತ ಹೇಳುವುದಕ್ಕಾಗುತ್ತಾ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ಹಾಸನ ಶಾಸಕ ಪ್ರೀತಮ್ ಗೌಡ
ಹಾಸನ ಶಾಸಕ ಪ್ರೀತಮ್ ಗೌಡ
author img

By

Published : Jul 29, 2021, 5:43 AM IST

Updated : Jul 29, 2021, 6:06 AM IST

ಹಾಸನ: ಬಸವರಾಜ ಬೊಮ್ಮಾಯಿ ಶಾಸಕರಾದಾಗ ಹಾಸನ ಸಂಸದರಾಗಿರುವ ಪ್ರಜ್ವಲ್​ರವರು ಹುಟ್ಟೇ ಇರಲಿಲ್ಲ, ಹಿರಿಯರ ಬಗ್ಗೆ ಮಾತುನಾಡುವಾಗ ತೂಕವಾಗಿ ಮಾತನಾಡಬೇಕೆಂದು ಪ್ರಜ್ವಲ್ ರೇವಣ್ಣ ಅವರ ಬೊಮ್ಮಾಯಿ ಅವರು ದೇವೇಗೌಡರ ಗರಡಿಯಲ್ಲಿ ಬೆಳೆದವರು ಎಂಬ ಹೇಳಿಕೆಗೆ ಹಾಸನ ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಪ್ರಾರಂಭವಾದ ಫುಡ್ ಕೋರ್ಟ್ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಶಾಸಕರಾದಾಗ ನಮ್ಮ ಸಂಸದರಾಗಿರುವ ಪ್ರಜ್ವಲ್​ರವರು ಹುಟ್ಟೇ ಇರಲಿಲ್ಲ. ಎಸ್.ಆರ್ ಬೊಮ್ಮಾಯಿ ಅವರಿಗಿಂತ ದೇವೇಗೌಡರು ಕಿರಿಯರು. ಹಾಗಂತ ದೇವೇಗೌಡರು ಬೊಮ್ಮಾಯಿ ಗರಡಿಯಲ್ಲಿ ಬೆಳೆದ್ರು ಅಂತ ಹೇಳುವುದಕ್ಕಾಗುತ್ತಾ ? ಪ್ರಜ್ವಲ್ ಕಿರಿಯರು ಅವರು ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಅವರು ಇನ್ನು ಮೆಚ್ಯೂರಿಟಿ ಇಲ್ಲದೇ ಮಾತನಾಡಿದ್ರೇ ಹೀಗೆ ಹಾಗೋದು ಎಂದು ಪ್ರೀತಂ ಗೌಡ ಪ್ರಜ್ವಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೊಮ್ಮಾಯಿ ಮೊದಲ ಬಾರಿ MLC ಆಗಿದ್ದಾಗ ಪ್ರಜ್ವಲ್ ರೇವಣ್ಣ ಹುಟ್ಟಿರಲಿಲ್ಲ

ಯಡಿಯೂರಪ್ಪ ಅವರ ಸೋಲು ಮುಂದಿನ ಗೆಲುವಿಗಾಗಿ

ಯಡಿಯೂರಪ್ಪ ಯಾವತ್ತು ಸೋಲಲ್ಲ, ಏನಾದರೂ ಅವರು ಸೋತಿದ್ದರೆ ಅದು ಮುಂದಿನ ಗೆಲುವಿಗಾಗಿ ಮಾತ್ರ. ಕಟ್ಟ ಕಡೆಯ ತನಕ ಸಿಎಂ ಸ್ಥಾನದಿಂದ ಬದಲಾವಣೆ ಆಗಲ್ಲ ಎಂದು ಬಹುಶಃ ನಾನೊಬ್ಬನೇ ವಾದ ಮಾಡಿದ್ದೆ. ಈಗಲೂ ಬದಲಾಗಿದ್ದಾರೆ ಎಂದು ನನಗೆ ನಂಬಲಾಗುತ್ತಿಲ್ಲ. ಆದರೆ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರದಲ್ಲಿ ಇರಬಾರದು ಎಂಬುದು ಪಕ್ಷದ ನಿರ್ಧಾರ. ಹಾಗಾಗಿ ಯಡಿಯೂರಪ್ಪನವರೇ ಸ್ವತಃ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಯಾರ ಒತ್ತಾಯವೂ ಕೂಡ ಇಲ್ಲ. ಯಾರು ಕೂಡಾ ರಾಜೀನಾಮೆ ನೀಡಿ ಎಂದು ಯಡಿಯೂರಪ್ಪನವರನ್ನು ಬಲವಂತ ಮಾಡಿರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಹಾಗೇನಾದರೂ ಬಲವಂತ ಮಾಡಿದ್ದರೆ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಬಹುದಿತ್ತು. ಆದರೆ ಪಕ್ಷದ ನಿಷ್ಠೆಗೆ ಅವರು ತಲೆಬಾಗಿದ್ದಾರೆ. ಬೊಮ್ಮಾಯಿಯವರು ಇವತ್ತಿನಿಂದ ನಮ್ಮ ಮುಖ್ಯಮಂತ್ರಿಗಳು. ಕರ್ನಾಟಕವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಆದರೆ ನನಗೆ ಮಂತ್ರಿ ಸ್ಥಾನ ಕೊಡಿ ಅಂತ ಯಾರಿಗೂ ಒತ್ತಡ ಹಾಕಲ್ಲ. ಈ ಭಾಗಕ್ಕೆ ಅವಶ್ಯಕತೆ ಇದೆಯ ಅಂತ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನು ಓದಿ: ಸರ್ಕಾರ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುನ್ನಡೆಯಲಿ: ಸಿಎಂ ಬೊಮ್ಮಾಯಿಗೆ ಎಸ್ಎಂಕೆ ಸಲಹೆ

Last Updated : Jul 29, 2021, 6:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.