ಬೇಲೂರು (ಹಾಸನ): ಕೋವಿಡ್ ಕೇರ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಾಡು ಹಾಡುವ ಮೂಲಕ ಪೊಲೀಸ್ ಅಧಿಕಾರಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು.
ಬೇಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿದೆ. ಇಲ್ಲಿ ಬೇಲೂರು ಲಯನ್ಸ್ ಸೇವಾ ಸಂಸ್ಥೆಯಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಪಿಐ ಯೋಗೇಶ್ ಕನ್ನಡ ಚಿತ್ರದ ಹಾಡು ಹಾಡುವ ಮೂಲಕ ಸೋಂಕಿತರ ಮನರಂಜಿಸಿದರು.
ಪೊಲೀಸ್ ಅಧಿಕಾರಿಯ ಹಾಡಿಗೆ ಅಲ್ಲಿದ್ದವರು ಚಪ್ಪಾಳೆ ತಟ್ಟಿ, ನೃತ್ಯ ಮಾಡಿ ಸಂತಪಟ್ಟರು.
ಇದನ್ನೂ ಓದಿ: ಸಂದಿಗ್ಧ ಪರಿಸ್ಥಿತಿಯಲ್ಲಿ ಜನರೊಂದಿಗೆ ನಿಂತ ಶಾಸಕ.. ದೇಶಾದ್ಯಂತ ರೇಣುಕಾಚಾರ್ಯರ ಸೇವೆಗೆ ಸಲಾಂ ಎಂದ ಜನ