ETV Bharat / state

ಕಟ್ಟೆ ಮುಚ್ಚಿ ನಿವೇಶನ ಮಾಡಿಕೊಳ್ಳುವ ಒಳಸಂಚು: ಗ್ರಾಮದ ದೇವರಕಟ್ಟೆ ಉಳಿವಿಗಾಗಿ ಗ್ರಾಮಸ್ಥರ ಪಣ - ವೀರಾಪುರ ದೇವರಕಟ್ಟೆ ವಿವಾದ

ಸುಮಾರು 200 ವರ್ಷಗಳ ಹಿಂದಿನ ಕಟ್ಟೆಯೊಂದನ್ನು ಮುಚ್ಚಿ ಆ ಜಾಗದಲ್ಲಿ ಬೇರೆ ಏನೋ ನಿರ್ಮಾಣ ಮಾಡಲು ನಿವೇಶನ ಮಾಡಲು ಹೊರಟಿದ್ದಾರೆ ಎಂದು ಹಾಸನ ಜಿಲ್ಲೆಯ ವೀರಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

people trying to close  the veerapur lake  alligation
ದೇವರಕಟ್ಟೆ ಉಳಿವಿಗಾಗಿ ಗ್ರಾಮಸ್ಥರ ಪಣ
author img

By

Published : Nov 24, 2020, 1:07 PM IST

ಹಾಸನ: ಹಾಸನ ಜಿಲ್ಲೆಯ ಸಾಲಗಾಮೆ ಸಮೀಪದ ವೀರಾಪುರ ಎಂಬ ಗ್ರಾಮದಲ್ಲಿ ಸುಮಾರು 200 ವರ್ಷಗಳ ಇತಿಹಾಸ ಇರುವ ದೇವಸ್ಥಾನದ ಕಟ್ಟೆಯನ್ನು ಸ್ವಹಿತಾಸಕ್ತಿಗಾಗಿ ಮುಚ್ಚಿಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದೇವರಕಟ್ಟೆ ಉಳಿವಿಗಾಗಿ ಗ್ರಾಮಸ್ಥರ ಪಣ

ಪ್ರಸ್ತುತ ಈ ದೇವರಕಟ್ಟೆ ನೀರಿಲ್ಲದೇ ಖಾಲಿಯಾಗಿದೆ. ಹೀಗಾಗಿ ಕೆಲವು ಬಿಜೆಪಿ ಪಕ್ಷದ ಬೆಂಬಲಿಗರು ಇದೇ ಪರಿಸ್ಥಿತಿಯ ಲಾಭ ಪಡೆದು ಊರಿನ ಕಟ್ಟೆ ಮುಚ್ಚಲು ಯತ್ನಿಸಿದ್ದಾರೆ. ಕಟ್ಟೆ ಇರುವ ಜಾಗವನ್ನು ಸ್ವಂತಕ್ಕೆ ಬಳಸಲು ಅನುಕೂಲವಾಗುವಂತೆ ಜೆಸಿಬಿ ಮೂಲಕ ಮಣ್ಣು ಹಾಕಿ ಮುಚ್ಚಲು ಹೊರಟಿದ್ದಾರೆ. ಗ್ರಾಮದ ರಾಜಕೀಯ ಮುಖಂಡರುಗಳೇ ಭೂ - ಕಬಳಿಕೆ ಯತ್ನಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರ ದೂರುತ್ತಿದ್ದಾರೆ.

people trying to close  the veerapur lake  alligation
ದೇವರಕಟ್ಟೆ ಉಳಿವಿಗಾಗಿ ಗ್ರಾಮಸ್ಥರ ಪಣ

ಹಬ್ಬ - ಹರಿದಿನಗಳಲ್ಲಿ ಇದೇ ಕಟ್ಟೆಯ ನೀರೇ ಆಧಾರವಾಗಿದ್ದು, ಸುಮಾರು ವರ್ಷಗಳಿಂದ ಈ ಕಟ್ಟೆ ಜಾನುವಾರುಗಳಿಗೆ ನೀರು ಕುಡಿಯುವ ಸ್ಥಳವಾಗಿದೆ ಮತ್ತು ಆದರೆ, ಕೆಲವರು ದುರುದ್ದೇಶದಿಂದ ಕಟ್ಟೆ ಮುಚ್ಚಲು ಬಂದಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಕಟ್ಟೆಯನ್ನು ಮುಚ್ಚಿದಂತೆ ತಡೆಯಾಜ್ಞೆ ನೀಡಬೇಕು ಎಂದು ಜನರು ಮನವಿ ಮಾಡಿದ್ದಾರೆ.

ಸರಕಾರದಿಂದಲೇ ಕಾಮಗಾರಿಯ ಬಿಲ್ ಪಡೆಯಲು ಗ್ರಾಮದ ಬಿಜೆಪಿ ಮುಖಂಡರುಗಳಾದ ಮಲ್ಲೇಶ್, ಕೀರ್ತಿ ಮತ್ತು ಸಿದ್ದೇಶ್ ಮುಂದಾಗಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಜೆಸಿಬಿ ಮೂಲಕ ಅಕ್ರಮವಾಗಿ ಕಲ್ಯಾಣಿ ಮುಚ್ಚುವ ಕಾರ್ಯ ಮಾಡುತ್ತಿದ್ದು, ಈಗ ಗ್ರಾಮಸ್ಥರು ಇವರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ದೇವರಕಟ್ಟೆ ಮುಚ್ಚಿದರೆ ಉಗ್ರ ಹೋರಾಟ ಮಾಡುತ್ತೇವೆ. ಜೊತೆಗೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.