ETV Bharat / state

ಕೊರೊನಾ ಭೀತಿ ನಡುವೆಯೂ ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ - ಕೊರೊನಾಗೆ ಹೆದರದ ಹಾಸನದ ಜನತೆ

ಕೊರೊನಾ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಕೆಲವೇ ಜನರು ಮಾತ್ರ ಅರಿತುಕೊಂಡು ಮನೆಯಲ್ಲೇ ಉಳಿದಿದ್ದಾರೆ. ಆದರೆ ಇನ್ನೂ ಕೆಲವರು ಇದ್ಯಾವುದಕ್ಕೂ ಹೆದರದೆ ಮಾರುಕಟ್ಟೆಗೆ ಗುಂಪು ಗುಂಪಾಗಿ ನುಗ್ಗುತ್ತಿದ್ದಾರೆ.

APMC market
ಎಪಿಎಂಪಿ ಮಾರುಕಟ್ಟೆ
author img

By

Published : Mar 31, 2020, 4:58 PM IST

ಹಾಸನ: ಕೊರೊನಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ,​ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಸೇರಿ ನಾನಾ ಇಲಾಖೆಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತಲೇ ಬಂದಿದೆ. ಆದರೆ ಜನರು ಯಾವುದನ್ನೂ ಲೆಕ್ಕಿಸದ ಜನರು ಇಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಗುಂಪಾಗಿ ಕಂಡುಬಂದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ

ಇದಕ್ಕೂ ಮುನ್ನ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ವರ್ತಕರು ನಿರ್ಧಾರ ಕೈಗೊಂಡಿದ್ದರು. ಆದರೆ ಸಾರ್ವಜನಿಕರಿಗೆ ಅನಾನುಕೂಲವಾಗಬಹುದು ಎಂಬ ಕಾರಣಕ್ಕೆ ವಾರದ 6 ದಿನಗಳು ವ್ಯಾಪಾರ ಮಾಡಲು ಅವಕಾಶ ಒದಗಿಸಿಕೊಡಲಾಗಿತ್ತು. ಅದರಲ್ಲೂ ರಿಟೇಲ್ ವ್ಯಾಪಾರ ಮಾಡುವವರಿಗೆ ಮಾತ್ರ ಒಳ ಪ್ರವೇಶ ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಕೊರೊನಾ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಕೆಲ ಜನರು ಮಾತ್ರ ಅರಿತುಕೊಂಡು ಮನೆಯಲ್ಲೇ ಉಳಿದಿದ್ದಾರೆ. ಆದರೆ ಇನ್ನೂ ಕೆಲವರು ಇದ್ಯಾವುದಕ್ಕೂ ಹೆದರುತ್ತಿಲ್ಲ.

ಸಾರ್ವಜನಿಕರ ಅಗತ್ಯವಸ್ತುಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಮಾರುಕಟ್ಟೆ ತೆರೆಯಲು ಅನುವು ಮಾಡಿಕೊಟ್ಟಿದ್ದರೂ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗುಂಪಾಗಿ ಸಾಮಗ್ರಿ ಕೊಂಡುವಳ್ಳಿ ನಿರತರಾಗಿದ್ದರು. ಜನರನ್ನು ಅಂತರದಲ್ಲಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ಪೊಲೀಸರು ಕೂಡಾ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದು ದೃಶ್ಯ ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.