ETV Bharat / state

ಮುಂದಿನ ದಿನಗಳಲ್ಲಿ ಕೊರೊನಾದಿಂದ ಅಲ್ಲ, ಊಟ ಸಿಗದೆ ಹೆಚ್ಚು ಜನ ಸಾಯುತ್ತಾರೆ: ರೇವಣ್ಣ - ಹೆಚ್.ಡಿ. ರೇವಣ್ಣ

ಇಂತಹ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ. ಬಡ ಜನತೆಯನ್ನು ಸಮಸ್ಯೆಯಿಂದ ಪಾರು ಮಾಡಲು ಸರ್ಕಾರ ಮುಂದಾದರೆ ನಮ್ಮ ಸಹಕಾರ ಇರುತ್ತದೆ ಎಂದು ರೇವಣ್ಣ ಭರವಸೆ ನೀಡಿದರು.

Ravenna
ಹೆಚ್.ಡಿ. ರೇವಣ್ಣ
author img

By

Published : Apr 16, 2020, 5:51 PM IST

ಹಾಸನ: ಮುಂದಿನ ದಿನಗಳಲ್ಲಿ ಕೊರೊನಾ ವೈರಸ್​ನಿಂದ ಜನರು ಸಾಯುವುದಿಲ್ಲ. ಆದರೆ ಊಟವಿಲ್ಲದೆ ಹೆಚ್ಚು ಜನ ಸಾಯುತ್ತಾರೆ. ಹಸಿದ ಹೊಟ್ಟೆಗೆ ಅನ್ನ ಕೊಡಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದರು.

ಕೊರೊನಾ ವೈರಸ್​ನಿಂದ ಜನ ಸಾಯುವುದಿಲ್ಲ, ಊಟವಿಲ್ಲದೇ ಹೆಚ್ಚು ಮಂದಿ ಸಾಯುತ್ತಾರೆ: ಹೆಚ್.ಡಿ.ರೇವಣ್ಣ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವೇ ಲಾಕ್​ಡೌನ್ ಆಗಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಈ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಗಮನ ಹರಿಸಿ ಸ್ಪಂದಿಸಬೇಕು ಎಂದರು.

ಹಾಸನ ಜಿಲ್ಲೆಯಲ್ಲಿ ಕಳೆದ 21 ದಿನಗಳಿಂದ ಬೀದಿ ವ್ಯಾಪಾರ, ಹೂ, ಹಣ್ಣು, ತರಕಾರಿ ಸಂತೆ, ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ತಮ್ಮ ಹೊಟ್ಟೆಪಾಡಿಗೆ ದುಡಿಯಲು ಹೋಗಿದ್ದ ನೌಕರರು ಜಿಲ್ಲೆಗೆ ಹಿಂತಿರುಗಿ ಬಂದಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಸೇರಿ ಜಿಲ್ಲೆಗೆ ಸುಮಾರು 50 ಸಾವಿರ ಮಂದಿ ಬಂದಿರುವ ನಿರೀಕ್ಷೆ ಇದೆ. ಇವರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕೂಡಲೇ ಪರಿಗಣಿಸಿ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಹಾಸನ ಜಿಲ್ಲಾಧಿಕಾರಿಗೆ ಖಾತೆಗೆ 5 ಕೋಟಿ ಹಣವನ್ನು ಪರಿಹಾರವನ್ನಾಗಿ ನೀಡಿ ಜನತೆಗೆ ತಲುಪಿಸುವಂತೆ ಮಾಡಬೇಕು. ಜಿಲ್ಲಾಧಿಕಾರಿಗಳಿಗೆ ಕೊವಿಡ್-19ನ ಅನುದಾನದ ಹಣವನ್ನು ಸರ್ಕಾರ ನೀಡಿದೆ. ಆದರೆ ಜಿಲ್ಲಾಧಿಕಾರಿಗಳಿಗೆ ಯಾವುದೇ ಶಿಷ್ಟಾಚಾರ ನೀಡದ ಹಿನ್ನೆಲೆಯಲ್ಲಿ ಹಣವನ್ನು ಟ್ರಜರಿಯಲ್ಲೇ ಇಟ್ಟು ಪೂಜೆ ಮಾಡುವಂತಾಗಿದೆ. ಅಲ್ಲೇ ಇಟ್ಟುಕೊಂಡು ಧೂಪ ಹಾಕಲಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರು ಬೆಳೆದಿರುವ ಬೆಳೆಗೆ ಲಾಭ ಕೊಡಲು ಸಾಧ್ಯವಾಗದಿದ್ದರೂ ವ್ಯವಸಾಯ ಮಾಡಿರುವ ವೆಚ್ಚದ ಹಣವನ್ನಾದರೂ ಬಿಡುಗಡೆ ಮಾಡಿ ರೈತರ ಸಂಕಷ್ಟ ನಿವಾರಿಸಿ ಎಂದು ಸಲಹೆ ನೀಡಿದರು.

ಎಂಎಲ್​ಎ, ಎಂಎಲ್​ಸಿ ನಿಧಿ ತಡೆಗೆ ಈಗಾಗಲೇ ಸೂಚನೆ ನೀಡಿದ್ದು, ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ತೊಂದರೆ ಉಂಟಾಗುತ್ತದೆ. ಆದ್ದರಿಂದ ಯಾವ ಅನುದಾನವನ್ನು ತಡೆ ಹಿಡಿಯಬಾರದು ಎಂದರು.

ಶಾಸಕರ ನಿಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಶಾಸಕರುಗಳ ಹೆಸರುಗಳನ್ನು ಅಭಿವೃದ್ಧಿಪಡಿಸಿರುವ ಸ್ಥಳದಲ್ಲಿ ಹಾಕುವ ಅವಶ್ಯಕತೆ ಇಲ್ಲ. ಒಂದು ವೇಳೆ ರೇವಣ್ಣನ ಹೆಸರು ಇದ್ದರೂ ಕೂಡ ಕೂಡಲೇ ತೆಗೆದು ಹಾಕಲಿ ಎಂದು ಗುಡುಗಿದರು.

ಈಗಾಗಲೇ ಹಾಸನ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರು ಭೇಟಿ ಮಾಡಿದ್ದರೂ ಇದುವರೆಗೂ ಇಲ್ಲಿನ ಜನತೆಗೆ ಯಾವ ಪ್ರಯೋಜನವಾಗಿಲ್ಲ. ಕೂಡಲೇ ಕೊರೊನಾ ಪರಿಹಾರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.