ETV Bharat / state

ಹಾಸನ : ದೇವಸ್ಥಾನಗಳ ಹುಂಡಿ ಹಣ ಕದಿಯುತ್ತಿದ್ದ ಕಳ್ಳರಿಗೆ ಜನರಿಂದ ಬಿತ್ತು ಗೂಸಾ - ಹಾಸನದಲ್ಲಿ ಕಳ್ಳರಿಗೆ ಧರ್ಮದೇಟು

ವಿಚಾರಣೆ ವೇಳೆ ಸುತ್ತಲಿನ ದೇವಾಲಯಗಳಲ್ಲಿ ತಾವು ಕಳ್ಳತನ ಮಾಡುತ್ತಿದ್ದೆವು ಎಂಬುವುದನ್ನು ಕಳ್ಳರು ಬಾಯ್ಬಿಟ್ಟಿದ್ದಾರೆ. ಇದಲ್ಲದೇ, ಇದೇ ವೇಳೆ ಇನ್ನೂ ಮೂವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ..

thieves
ದೇವಸ್ಥಾನಗಳ ಹುಂಡಿ ಹಣ ಕದಿಯುತ್ತಿದ್ದ ಕಳ್ಳರಿಗೆ ಜನರಿಂದ ಬಿತ್ತು ಗೂಸಾ
author img

By

Published : Dec 28, 2021, 3:51 PM IST

ಹಾಸನ : ದೇವಸ್ಥಾನಗಳಳ ಹುಂಡಿ ಹಣವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಗೌಡಗೆರೆಯಲ್ಲಿ ಮಂಗಳವಾರ ನಡೆದಿದೆ. ಕುಮಾರ್ (22) ಹಾಗೂ ಮಂಜುನಾಥ್ (23) ಎಂಬುವರು ಗೂಸಾ ತಿಂದ ಆರೋಪಿಗಳು.

ದೇವಸ್ಥಾನಗಳ ಹುಂಡಿ ಹಣ ಕದಿಯುತ್ತಿದ್ದ ಕಳ್ಳರಿಗೆ ಜನರಿಂದ ಬಿತ್ತು ಗೂಸಾ..

ಕಳೆದ ಮೂರ್ನಾಲ್ಕು ತಿಂಗಳಿನಿಂದ 4 ಮಂದಿಯ ಕಳ್ಳರ ಗುಂಪೊಂದು ಜಿಲ್ಲೆಯ ಚನ್ನರಾಯಪಟ್ಟಣ ಸಮೀಪದ ಶ್ರವಣಬೆಳಗೊಳ, ಮಟ್ಟನವಿಲೆ, ಮಾದಿಹಳ್ಳಿ, ಡೈರಿ ಶೆಟ್ಟಿಹಳ್ಳಿ, ಗೌಡಗೆರೆ ಸೇರಿದಂತೆ ಹಲವು ದೇವಾಲಯಗಳಲ್ಲಿನ ಹುಂಡಿ ಹಣವನ್ನು ಕಳ್ಳತನ ಮಾಡಿದ್ದು ಪತ್ತೆಯಾಗಿತ್ತು. ಈ ಬಗ್ಗೆ ಹಿರೀಸಾವೆ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದವು.

ಇಂದು ಬೆಳಗ್ಗೆ ಚನ್ನರಾಯಪಟ್ಟಣದ ಗೌಡಗೆರೆ ಗ್ರಾಮದಲ್ಲಿನ ವೆಂಕಟೇಶ್ವರ ದೇವಾಲಯದಲ್ಲಿ ಕಳ್ಳರ ಗುಂಪು ಕನ್ನ ಹಾಕಲು ಯತ್ನಿಸಿದಾಗ 5 ಮಂದಿ ಕಳ್ಳರ ಪೈಕಿ ಇಬ್ಬರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಇಬ್ಬರು ಕಳ್ಳರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ವಶಕ್ಕೆ ನೀಡಿದ್ದಾರೆ.

ವಿಚಾರಣೆ ವೇಳೆ ಸುತ್ತಲಿನ ದೇವಾಲಯಗಳಲ್ಲಿ ತಾವು ಕಳ್ಳತನ ಮಾಡುತ್ತಿದ್ದೆವು ಎಂಬುವುದನ್ನು ಕಳ್ಳರು ಬಾಯ್ಬಿಟ್ಟಿದ್ದಾರೆ. ಇದಲ್ಲದೇ, ಇದೇ ವೇಳೆ ಇನ್ನೂ ಮೂವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 2022ರಲ್ಲಿ ವಿಶ್ವಕ್ಕೆ ಕಾದಿದೆ ಮತ್ತೊಂದು ಸಾಂಕ್ರಾಮಿಕ ರೋಗ : ದಿವ್ಯಾಂಗ ಚೇತನ ಬಾಬಾ ವಂಗಾ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.