ಹಾಸನ: ಅಸಂಘಟಿತ ಕಾರ್ಮಿಕರು ಒಂದೆಡೆ ಕೊರೊನಾದಿಂದ ಮತ್ತೊಂದೆಡೆ ಹಸಿವಿನಿಂದ ಸಾಯುತ್ತಿದ್ದಾರೆ. ಹಾಸನದಲ್ಲಿ 10ಕ್ಕೂ ಹೆಚ್ಚು ಮಂದಿ ಲಾಲ್ಡೌನ್ನಿಂದ ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಒಬ್ಬ ಗುತ್ತಿಗೆದಾರನಿಗೆ 1,200 ಕೋಟಿ ರೂ ಬಿಡುಗಡೆ ಮಾಡುತ್ತದೆ. ಅದ್ರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಸಿವಿನಿಂದ ಸಾಯುತ್ತಿರುವ ಅಸಂಘಟಿತ ವಲಯಕ್ಕೆ ನೆರವಾಗದೆ ಅವರನ್ನು ಸಾವಿನ ದವಡೆಗೆ ತಳ್ಳುತ್ತಿದೆ ಎಂದು ಕಿಡಿಕಾರಿದ್ರು.
ಈಗಾಗಲೇ ನಾನು ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು, ಅಸಂಘಟಿತ ಸರ್ಕಾರದಿಂದ ರೀತಿಯ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಡಿಸಿಯವರು ಹೇಳ್ತಾರೆ. ಹಾಗಾಗಿ ಸರ್ಕಾರ ಕೂಡಲೇ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತುರ್ತು ಸಭೆ ಕರೆದು ಅಸಂಘಟಿತರಿಗೆ ನೆರವಾಗುವಂತಹ ರೀತಿಯಲ್ಲಿ ಯೋಜನೆ ಘೋಷಿಸಬೇಕು ಎಂದರು.
ಗ್ರಾಮೀಣ ಭಾಗದ ರೈತರು ಮತ್ತು ನಗರ ಪ್ರದೇಶದ ಅಸಂಘಟಿತ ವರ್ಗದವರಿಗೆ ಕೂಡಲೇ ತಿಂಗಳಿಗೆ ಇಂತಿಷ್ಟು ಅಂತ ಅವರ ಖಾತೆಗೆ ಹಣ ಹಾಕಿದರೆ ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಈ ರೀತಿಯ ಯೋಜನೆಯನ್ನು ಜಾರಿಗೆ ತನ್ನಿ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.