ETV Bharat / state

ರೆಸಾರ್ಟ್, ಹೋಂ ಸ್ಟೇಗಳನ್ನು ತಕ್ಷಣದಲ್ಲಿ ಮುಚ್ಚುವಂತೆ ಆದೇಶ ಹೊರಡಿಸಿ: ಹೆಚ್.ಕೆ. ಕುಮಾರಸ್ವಾಮಿ - ಜೆಡಿಎಸ್ ರಾಜ್ಯಾಧ್ಯಕ್ಷ

ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಕಡ್ಡಾಯವಾಗಿ ತಕ್ಷಣದಲ್ಲಿ ಮುಚ್ಚಬೇಕು. ಮತ್ತೆ ಒಂದು ವಾರ ಸಮಯ ಕೊಡುವುದು ಸರಿಯಲ್ಲ. ಇವುಗಳ ಬಾಗಿಲು ತೆರೆದಿರುವುದರಿಂದಲೇ ರಸ್ತೆಯಲ್ಲಿ ವಾಹನಗಳು ಹೆಚ್ಚು ಓಡಾಡುತ್ತಿದೆ. ಇದರಿಂದಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದೇ ಆದೇಶ ಮಾಡಿ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಮುಚ್ಚಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

H K Kumaraswamy
ಹೆಚ್.ಕೆ. ಕುಮಾರಸ್ವಾಮಿ
author img

By

Published : Jul 1, 2020, 6:38 PM IST

ಹಾಸನ: ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಅದೇ ರೀತಿ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ತಕ್ಷಣದಲ್ಲಿ ಮುಚ್ಚಲು ಆದೇಶ ಹೊರಡಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಸಕಲೇಶಪುರ ತಾಲೂಕು ಕೊರೊನಾ ಮುಕ್ತವಾಗಿರುವುದು ಸಂತೋಷವಿತ್ತು. ಆದರೆ ಸರ್ಕಾರದ ಸ್ಪಷ್ಟ ನಿಲುವು ಹಾಗೂ ಬದ್ಧತೆಯಿಲ್ಲದ ಕಾರಣ ಇಂದು ಇಡೀ ಜಿಲ್ಲೆಗೆ ಸೋಂಕು ಹರಡಿದೆ.

ಕಂದಾಯ ಸಚಿವ ಆರ್. ಅಶೋಕ್​ ಅವರು ಹಾಸನ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳ ಕಟ್ಟಡವನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಪ್ರಕಟಣೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ.

ಹೆಚ್.ಕೆ. ಕುಮಾರಸ್ವಾಮಿ

ನೂತನ ಕಟ್ಟಡದ ಚಿಂತನೆ ಹೊಸದಲ್ಲ. ನಮ್ಮ ಜೆಡಿಎಸ್ ಸರ್ಕಾರ ಇದ್ದಾಗಲೇ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಈ ಚಿಂತನೆ ಮಾಡಿದ್ದರು. ಇದು ಮುಂದುವರಿದ ಭಾಗವಾಗಿದ್ದು, ನೂತನ ಜಿಲ್ಲಾಡಳಿತ ಕಟ್ಟಡ ನಿರ್ಮಾಣವಾದರೆ ಅದು ಹಾಸನ ಜಿಲ್ಲೆಯ ಆಸ್ತಿಯಾಗುತ್ತದೆ ಎಂದು ಹೇಳಿದರು.​

ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಕಡ್ಡಾಯವಾಗಿ ತಕ್ಷಣದಲ್ಲಿ ಮುಚ್ಚಬೇಕು. ಆದರೆ ಮತ್ತೆ ಒಂದು ವಾರ ಸಮಯ ಕೊಡುವುದು ಸರಿಯಲ್ಲ. ಇವುಗಳ ಬಾಗಿಲು ತೆರೆದಿರುವುದರಿಂದಲೇ ರಸ್ತೆಯಲ್ಲಿ ವಾಹನಗಳು ಹೆಚ್ಚು ಓಡಾಡುತ್ತಿದೆ. ಇದರಿಂದಲೇ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿದ್ದು, ಇಂದೇ ಆದೇಶ ಮಾಡಿ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ನಿಲ್ಲಿಸಬೇಕಾಗಿದೆ ಎಂದರು.

ಕೊರೊನಾದ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗಿಲ್ಲ. ಇಷ್ಟೆಲ್ಲಾ ಪಾಸಿಟಿವ್ ಪ್ರಕರಣ ಬರುತ್ತಿದ್ದರೂ ನಿಯಮವನ್ನು ಕಟ್ಟುನಿಟ್ಟು ಮಾಡುತ್ತೇವೆ ಎನ್ನುತ್ತಾರೆ. ಆದರೆ ಲಾಕ್​ಡೌನ್ ಮಾಡಲು ಮುಂದಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.