ETV Bharat / state

ಸ್ವರ್ಗದಂತಿರುವ ಪಟ್ಲ ಬೆಟ್ಟದಲ್ಲಿ ಕಿಡಿಗೇಡಿಗಳ ಕಾಟಕ್ಕೆ ಪ್ರವಾಸಿಗರು ತತ್ತರ!

ವನಗೂರಿನಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಪಟ್ಲ ಬೆಟ್ಟವು ಸುಂದರವಾಗಿದ್ದರೂ ಸಹ ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ.

ಪಟ್ಲ ಬೆಟ್ಟ
ಪಟ್ಲ ಬೆಟ್ಟ
author img

By

Published : Oct 22, 2020, 10:58 AM IST

Updated : Oct 22, 2020, 12:26 PM IST

ಸಕಲೇಶಪುರ (ಹಾಸನ): ಬೆಟ್ಟದ ಮೇಲೆ ಹೋಗಿ ನೋಡಿದರೆ ಸ್ವರ್ಗ. ಹಿಂತಿರುಗಿ ಬಂದರೆ ನರಕ ನೋಡಬೇಕಾದ ಪರಿಸ್ಥಿತಿ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಲಕ್ಕೆ ಬರುವ ಪ್ರವಾಸಿಗರಿಗೆ ಎದುರಾಗಿದೆ.

ತಾಲೂಕಿನ ವನಗೂರು ಗ್ರಾಪಂ ವ್ಯಾಪ್ತಿಯ ಪಟ್ಲ ಬೆಟ್ಟ ಕೊಡಗಿನ ಸೋಮವಾರಪೇಟೆ ತಾಲೂಕಿಗೆ ತಂಬಾ ಹತ್ತಿರದಲ್ಲಿದ್ದು, ಗುಡ್ಡಗಾಡು ಪ್ರದೇಶ, ದಟ್ಟ ಅರಣ್ಯ, ಜಲಪಾತಗಳನ್ನು ಹೊಂದಿದೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ತಾಲೂಕಿನ ಬಿಸಿಲೆ ಮುಂತಾದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ವನಗೂರಿನಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಪಟ್ಲ ಬೆಟ್ಟಕ್ಕೆ ಭೇಟಿ ನೀಡುವುದು ಸಾಮಾನ್ಯ. ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿರುವ ಈ ಬೆಟ್ಟದ ಮೇಲಿಂದ ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಯ ಗಿರಿಶಿಖರಗಳು ಹಾಗೂ ಜಲಪಾತಗಳು ಕಾಣಿಸುತ್ತವೆ. ಬೆಟ್ಟದ ಮೇಲಿಂದ ಮೋಡಗಳು ಹಾಗೂ ಮಂಜು ಕವಿಯುವ ದೃಶ್ಯ ನೋಡಲು ಎರಡು ಕಣ್ಣುಗಳೂ ಸಾಲದು. ಆದರೆ ಬೆಟ್ಟದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ. ನೀರು ಕುಡಿಯಲು ಕೂಡ ಪ್ರವಾಸಿಗರು ಪರದಾಡಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಇಲ್ಲಿಗೆ ಬರುವ ಕಿಡಿಗೇಡಿಗಳು ಎಲ್ಲೆಂದರಲ್ಲಿ ಮದ್ಯ ಹಾಗೂ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಿಸಾಡಿ ದಾಂಧಲೆ ನಡೆಸುತ್ತಿರುವುದು ಆತಂಕ ಮೂಡಿಸಿದೆ.

ಪಟ್ಲ ಬೆಟ್ಟದಲ್ಲಿ ಕಿಡಿಗೇಡಿಗಳ ಕಾಟ

ಜೀಪುಗಳು ಮಾತ್ರ ಬೆಟ್ಟದ ತುದಿಗೆ ಹೋಗುವುದರಿಂದ ಕೆಲವರು ತಮ್ಮ ವಾಹನಗಳನ್ನು ಬೆಟ್ಟದ ಕೆಳಗೆ ನಿಲ್ಲಿಸಿ ನಡೆದುಕೊಂಡು ಹೋಗಿ ಬೆಟ್ಟದ ಸೌಂದರ್ಯವನ್ನು ವೀಕ್ಷಣೆ ಮಾಡಿದರೆ, ಕೆಲವರು ಬಾಡಿಗೆ ವಾಹನದಲ್ಲೇ ಬೆಟ್ಟ ವೀಕ್ಷಿಸಲು ತೆರಳುತ್ತಾರೆ. ಪ್ರವಾಸಿಗರು ಬೆಟ್ಟ ಹತ್ತಿ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಿ ಸಂತೋಷದಿಂದ ಹಿಂತಿರುಗಿ ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದರೆ ಅಘಾತಕ್ಕೀಡಾಗಬೇಕಾಗುತ್ತದೆ. ಏಕೆಂದರೆ ಪಟ್ಲ ಸುತ್ತಮುತ್ತಲಿನ ಕೆಲವು ಕಿಡಿಗೇಡಿಗಳು ಬೆಟ್ಟದ ಕೆಳಗೆ ನಿಲ್ಲಿಸಿರುವ ವಾಹನಗಳ ಟೈರ್​​​ಗಳನ್ನು ಪಂಕ್ಚರ್ ಮಾಡಿರುತ್ತಾರೆ. ಈ ವೇಳೆ ನೆರವಿಗೆ ಬರಲು ಸುತ್ತಮುತ್ತಲು ಯಾರೂ ಸಹ ಇರುವುದಿಲ್ಲ.

ರಸ್ತೆಯಲ್ಲಿ ತಿರುಗಾಡುವವರ ಬಳಿ ಕಾಡಿ ಬೇಡಿ ಸರ್ಕಸ್ ಮಾಡಿಕೊಂಡು 18 ಕಿ.ಮೀ. ದೂರದ ಹೆತ್ತೂರು ಅಥವಾ 52 ಕಿ.ಮೀ. ದೂರದ ಸಕಲೇಶಪುರಕ್ಕೆ ಹೋಗಿ ಪಂಕ್ಚರ್ ಹಾಕುವವರನ್ನು ಹುಡುಕಿ ಬಾಡಿಗೆ ವಾಹನದಲ್ಲಿ ಬದಲಿ ಟೈರ್​ಗಳನ್ನು ತಂದು ರಿಪೇರಿ ಮಾಡಬೇಕಾಗುತ್ತದೆ.

ಕಳೆದ ಆಗಸ್ಟ್ ಅಂತ್ಯದಲ್ಲಿ ಬೆಟ್ಟದ ಕುರಿತು ವರದಿ ಮಾಡಲು ಹೋದ ಸಕಲೇಶಪುರದ ಪತ್ರಕರ್ತರ ಎರಡು ಕಾರುಗಳ ಎಲ್ಲಾ ಟೈರ್​​​ಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಕೆಲವೊಮ್ಮೆ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಉದಾಹರಣೆಗಳೂ ಇವೆ. ಕೆಲವು ಸಂದರ್ಭಗಳಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದೂ ಉಂಟು. ಆದರೆ ಮರ್ಯಾದೆಗೆ ಅಂಜಿ ಹಲವರು ಈ ಕುರಿತು ದೂರು ನೀಡಲು ಮುಂದಾಗುವುದಿಲ್ಲ. ಇಲ್ಲಿ ದೌರ್ಜನ್ಯಕ್ಕೆ ಒಳಗಾಗುವರು ಬಹುತೇಕರು ಹೊರ ಊರುಗಳಿಂದ ಬರುವವರು. ಇಲ್ಲಸಲ್ಲದ ನೆಪ ಹೇಳಿಕೊಂಡು ಇಲ್ಲಿಗೆ ಬರುವ ಪ್ರವಾಸಿಗರ ವಿರುದ್ಧ ನೈತಿಕ ಪೋಲಿಸ್​ಗಿರಿ ತೋರುತ್ತಿರುವವರ ವಿರುದ್ಧ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

Last Updated : Oct 22, 2020, 12:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.