ETV Bharat / state

ಶಿಲ್ಪ ಕಲೆಗಳ ತವರಲ್ಲಿ ತುಂಡುಡುಗೆ ತೊಟ್ಟು ನಂಗಾನಾಚ್​​... ಸದ್ದು ಮಾಡ್ತಿದೆ ವಿಡಿಯೋ ​​ - Ganesha fest

ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ, ಶಿಲ್ಪ ಕಲೆಗಳ ತವರೂರಲ್ಲಿ ನಂಗಾನಾಚ್​ ನಡೆದಿದೆ. ಈ ವಿಡಿಯೋ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಂಗನಾಚ್
author img

By

Published : Sep 22, 2019, 1:51 PM IST

ಹಾಸನ: ಗಣೇಶ ನಿಮಜ್ಜನದ ಉತ್ಸವದಲ್ಲಿ ಶುಕ್ರವಾರ ಸಂಜೆ ಯುವತಿಯವರಿಂದ ನಂಗಾನಾಚ್ ಮಾಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಿಲ್ಪ ಕಲೆಗಳ ತವರೂರಲ್ಲಿ ಈ ಪ್ರಕರಣ ನಡೆಯುವ ಮೂಲಕ ಜಿಲ್ಲೆಯ ಮಾನ ಹರಾಜಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಂಗಾನಾಚ್

ಗಣೇಶ ನಿಮಜ್ಜನ ಸಂದರ್ಭದಲ್ಲಿ ಗ್ರಾಮದ ಗಣಪತಿ ಸೇವಾ ಸಮಿತಿಯವರು ಬೆಂಗಳೂರಿನಿಂದ ಡ್ಯಾನ್ಸ್ ತಂಡದವರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ರು. ಈ ವೇಳೆ ಆ ತಂಡದ ನೃತ್ಯಗಾರ್ತಿಯರು ತುಂಡುಡುಗೆಗಳನ್ನು ಧರಿಸಿ ನೃತ್ಯ ಮಾಡೋ ಮೂಲಕ ನೆರೆದಿದ್ದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರೆ, ಇನ್ನೂ ಕೆಲವರು ಮಾನ ಮರ್ಯಾದೆ ಇಲ್ಲ ಅಂತ ಬೈಕೊಂಡು ವೇದಿಕೆಯಿಂದ ವಾಪಸ್ ಮನೆಗೆ ಹೋದ್ರು.

ವಾಟರ್ ಬಾಟಲ್ ನಲ್ಲಿ ಮದ್ಯ:
ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಓರ್ವ ಯುವತಿ ತುಂಡುಡುಗೆ ಹಾಕಿಕೊಂಡು, ಕೈಯಲ್ಲಿ ಮದ್ಯ ತುಂಬಿದ್ದ ವಾಟರ್ ಬಾಟಲ್​ನಲ್ಲಿ ನೆರೆದಿದ್ದ ಯುವಕರಿಗೆ ಕೊಟ್ಟಿದ್ದಾಳೆ ಎಂಬ ಆರೋಪ ಸಹ ಕೇಳಿಬಂದಿದೆ.

Intro:ಹಾಸನ: ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಷ್ಟೆಯಲ್ದೆ ನಂಗಾನಾಚ್ ನೃತ್ಯ ಮಾಡುವ ವೇಳೆ ದೇವಸ್ಥಾನದಲ್ಲಿ ತೀರ್ಥ ಕೊಡುವ ಹಾಗೆ ವಾಟರ್ ಬಾಟಲಿ ನಲ್ಲಿ ಮದ್ಯವನ್ನು ಕೊಟ್ಟು ನೆರೆದಿದ್ದ ಕೆಲ ಹುಡುಗರಿಗೆ ನಶೆಯೇರಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಮಾಜಿ ಪ್ರಧಾನಿಗಳ ತವರೂರಾಗಿರುವ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಶಿಲ್ಪ ಕಲೆಗಳ ತವರೂರಲ್ಲಿ ಇಂತಹದೊಂದು ಪ್ರಕರಣ ನಡೆಯುವ ಮೂಲಕ ಜಿಲ್ಲೆಯ ಮಾನ ಹರಾಜಾಗಿದೆ.

ನಂಗನಾಚ್ ನೋಡೋಕ್ಕಾಗದೇ ಕಣ್ಣು ಮುಚ್ಚಿಕೊಂಡು ವಾಪಸ್ಸಾದ ಗ್ರಾಮಸ್ಥರು:

ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಗ್ರಾಮದ ಗಣಪತಿ ಸೇವಾ ಸಮಿತಿಯವರು ಬೆಂಗಳೂರಿನಿಂದ ಸೂಪರ್ ಹಿಟ್ ಡ್ಯಾನ್ಸ್ ತಂಡದವರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ರು. ಈ ವೇಳೆ ಸುಪರ್ ಹಿಟ್, ಡ್ಯಾನ್ಸ್ ತಂಡದ ನೃತ್ಯಗಾರ್ತಿಯರು ತುಂಡುಡುಗೆಗಳನ್ನು ಹುಟ್ಟು ಡಾನ್ಸ್ ಮಾಡೋ ಮೂಲಕ ನೆರೆದಿದ್ದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರೆ, ಇನ್ನೂ ವಯಸ್ಸಾದ ಕೆಲವರು ಮಾನ ಮರ್ಯಾದೆ ಇಲ್ಲ ಅಂತ ಬೈಕೊಂಡು ವೇದಿಕೆಯಿಂದ ವಾಪಸ್ ಮನೆಗೆ ಹೋದರು.

ವಾಟರ್ ಬಾಟಲ್ ನಲ್ಲಿ ಮಧ್ಯ ಹಾಕೊಂಡು ತೀರ್ಥದ ರೀತಿ ಕೊಟ್ಟ ಯುವತಿ:

ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಓರ್ವ ಯುವತಿ ತುಂಡು ಉಡುಗೆ ಹುಟ್ಟು, ಕೈಯಲ್ಲಿ ಮಧ್ಯ ತುಂಬಿದ್ದ ವಾಟರ್ ಬಾಟಲ್ ಇಟ್ಕೊಂಡು ವೇದಿಕೆ ಕೆಳಗೆ ಕೂತಿದ್ದ ಹುಡುಗರಿಗೆ ದೇವಸ್ಥಾನದಲ್ಲಿ ತೀರ್ಥ ಕೊಡುವ ರೀತಿ ಮಧ್ಯವನ್ನು ಸುರಿದು ಅಶ್ಲೀಲವಾಗಿ ನಡೆದುಕೊಂಡಿದ್ದ ಅಷ್ಟೇ ಅಲ್ಲದೆ ತಮ್ಮ ಮೈಮಾಟವನ್ನು ತೋರಿಸಿಕೊಂಡು ನೃತ್ಯ ಮಾಡಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಸಾಮಾನ್ಯವಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ಹಿಂದೆ ಭಜನೆ, ಭಾವಗೀತೆ, ಭಕ್ತಿಗೀತೆ, ನಾಟಕಗಳ, ಪ್ರದರ್ಶನ ನಡೆಯುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಲ ಬದಲಾದಂತೆ ಜನರ ಮನಸ್ಥಿತಿ ಅಷ್ಟೇ ಅಲ್ಲದೆ ಚಟುವಟಿಕೆಗಳು ಕೂಡ ಬದಲಾಗಿದೆ. ಕಳೆದ 15 ದಿನಗಳಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ವಿಸರ್ಜನೆ ಮಾಡುವ ಕಾರ್ಯಕ್ರಮವನ್ನು ಹೊಳೆನರಸೀಪುರ ತಾಲೂಕು ಮೊಸಳೆಹೊಸಳ್ಳಿಯಲ್ಲಿ ಆಯೋಜನೆ ಮಾಡಲಾಗಿತ್ತು.

ಇಂತಹ ಒಂದು ಸಂದರ್ಭದಲ್ಲಿ ಇಬ್ಬರು ಯುವತಿಯರು ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ತನ್ನ ಸೊಂಟವನ್ನ ಬಳುಕಿಸುತ್ತಾ ನೆರೆದಿದ್ದ ಹದಿಹರೆಯದ ಹುಡುಗರ ಮನಸ್ಸನ್ನ ಸೋರೆ ಮಾಡಿದ್ದಷ್ಟೇ ಅಲ್ಲದೆ ಉತ್ತರ ಭಾರತದ ಸಂಸ್ಕೃತಿಯನ್ನು ದಕ್ಷಿಣ ಭಾರತಕ್ಕೆ ತಂದು ಶಿಲ್ಪಕಲೆಗಳ ತವರುರಲ್ಲಿ ನಂಗಾನಾಚ್ ಮಾಡೋ ಮೂಲಕ ಜಿಲ್ಲೆಗೆ ಮಸಿ ಬಳಿದಿದ್ದಾರೆ.

ಅದು ಮಾಜಿ ಪ್ರಧಾನಿ ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ ಇಂತಹದ್ದೊಂದು ನಾಚಿಕೆಗೇಡಿನ ನಂಗಾನಾಚ್ ನಡೆದಿರುವುದು ಜಿಲ್ಲೆಯೆ ತಲೆತಗ್ಗಿಸುವಂತೆ ಮಾಡಿದೆ.

ಒಟ್ಟಾರೆ ದೇವರ ಕಾರ್ಯಕ್ರಮಗಳನ್ನು ಆಯೋಜಿಸಿ ಅಶ್ಲೀಲ ನೃತ್ಯಗಳ ನಂಗನಾಚ್ ಪ್ರದರ್ಶನ ನಡೆಯುತ್ತಿದ್ದರು ಸ್ಥಳದಲ್ಲಿದ್ದ ಪೊಲೀಸರು ಏನು ಮಾಡುತ್ತಿದ್ದರು. . . ? ಎಂಬುದು ಕೆಲವರ ಪ್ರಶ್ನೆ.. . ? ಅದೇನೇ ಇರಲಿ ಜಿಲ್ಲೆಯ ಮಾನ ಅಂತೂ ಹೋಯ್ತು. ಅದೇನೋ ಅಂತಾರಲ್ಲ ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರು ಬಾರದಂತೆ ಹಾಗಾಗಿದೆ ಜಿಲ್ಲೆಯ ಪರಿಸ್ಥಿತಿ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.