ಹಾಸನ: ಶ್ವಾನ ತರಲು ಹೋದ ಯುವಕನಿಗೆ ಡ್ರ್ಯಾಗರ್ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
![Murder of A youth in hassan](https://etvbharatimages.akamaized.net/etvbharat/prod-images/11298193_thumb.jpg)
ದೊಡ್ಡಮಂಡಿಗನಹಳ್ಳಿಯ ಮನೋಜ್ (20) ಮೃತ ಯುವಕ. ಭಾನುವಾರ ಶ್ವಾನ ತರಲು ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದ ಮನೋಜ್ಗೆ ವಿಜಯನಗರ ಬಡಾವಣೆ ಬಳಿ ಎರಡ್ಮೂರು ಬಾರಿ ಡ್ರ್ಯಾಗರ್ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಮೋರಿ ಕೆಳಗೆ ಎಸೆದು ಪರಾರಿಯಾಗಿದ್ದಾರೆ.
ಮನೋಜ್ ಸ್ನೇಹಿತರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೆನ್ಷನ್ ಮೊಹಲ್ಲಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.