ಹಾಸನ: ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣ ಸದ್ದಿಲ್ಲದಂತೆ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ದಿನೇಶ್ ಎಂಬುವವರು ಹಣ ಕಳೆದು ಕೊಂಡವರು. ನಗರದ ಸಂಪಿಗೆ ರಸ್ತೆಯ ಐಡಿಬಿಐ ಬ್ಯಾಂಕ್ಗೆ ಮದ್ಯಾಹ್ನ 1: 45 ರ ಸುಮಾರಿಗೆ ಹೋಗಿದ್ದ ಅವರು ತನ್ನ ಖಾತೆಯಿಂದ 3 ಲಕ್ಷ ಹಣ ಡ್ರಾ ಮಾಡಿದ್ದು, ಹೊರಗೆ ನಿಲ್ಲಿಸಿದ್ದ ಬೈಕ್ ಬಳಿ ಬಂದು ಬೈಕ್ನ ಡಿಕ್ಕಿಯಲ್ಲಿಟ್ಟಿದ್ದಾರೆ. ಬಳಿಕ ಹೆಲ್ಮೆಟ್ ತರಲು ಬ್ಯಾಂಕ್ ಒಳಗೆ ಹೋಗಿ ಬರುವಷ್ಟರಲ್ಲಿ ಖದೀಮರು ಹಣವನ್ನು ದೋಚಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.