ಹಾಸನ: ಸತ್ತ ಮೇಲೂ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ ಅಧಿಕಾರವಧಿಯಲ್ಲಿ ಭ್ರಷ್ಟಚಾರದ ಹಣ ಬಿಟ್ಟು ಕೆಲಸ ಮಾಡಬೇಕು ಎಂದು ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲಾ ಬಾಬು ಜಗಜೀವನ್ ರಾವ್ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸತ್ತ ಮೇಲು ಹೆಸರು ಬರಬೇಕಾದರೇ ಭ್ರಷ್ಟ ಹಣ ಬಿಟ್ಟು ಕೆಲಸ ಮಾಡು. ನನ್ನ ಆತ್ಮ ಮತ್ತು ಭಗವಂತ ಒಪ್ಪುವ ರೀತಿ ಜನಸೇವೆಯ ಕೆಲಸ ಮಾಡಿದ್ದೇನೆ ಹಾಗೇ ಮುಂದೆಯೂ ಮಾಡುತ್ತೇನೆ ಎಂದರು.
ನಮ್ಮ ಜಾತಿಯನ್ನು ನಾವೇ ಹೇಳಿಕೊಳ್ಳಲು ಹಿಂಜರಿದರೇ ದೊಡ್ಡ ತಪ್ಪು ಆಗುತ್ತದೆ. ಈ ಜನಾಂಗದಲ್ಲಿ ಹುಟ್ಟಿ ನ್ಯಾಯ ಒದಗಿಸದೇ ಹೋದರೇ ಮತ್ತೊಂದು ಋಣ ತೀರಿಸದೇ ಭೂಮಿಯಿಂದ ಹೋಗುತ್ತೀದ್ದೇವೆ ಎಂದರ್ಥ. ಯಾರಿಗೆ ತಮ್ಮ ಜಾತಿ ಹೆಸರು ಹೇಳಿಕೊಳ್ಳಲು ದೈರ್ಯವಿಲ್ಲ ಅಂತಹವರನ್ನು ಸೇರಿಸಿಕೊಳ್ಳಬೇಡಿ ಎಂದು ಹೇಳಿದರು.
ನಾನು ಮಂತ್ರಿ ಯಾವತ್ತಿದ್ರು ಆಗುತ್ತೇನೆ ಆದರೇ ನನ್ನ ಸಮಯವೇ ಸರಿಯಾಗಿಲ್ಲ. ನಾನು ಶಾಸ್ತ್ರವನ್ನು ನಂಬುತ್ತೇನೆ ಜೊತೆಗೆ ನನ್ನ ರಾಶಿಲಿ ಸಾಡೇಸಾತ್ ನಡೆಯುತ್ತಿರುವುದರಿಂದ ಸಲ್ಪ ವ್ಯತ್ಯಾಸವಾಗಿದೆ. ಕಾಂಗ್ರೆಸ್ನಲ್ಲಿ ಸೋನಿಯಗಾಂಧಿ, ರಾಹುಲ್ ಗಾಂಧಿಯವರೇ ನನ್ನ ಹೆಸರನ್ನು ಪಟ್ಟಿಯಲ್ಲಿ ಇಟ್ಟಿಕೊಳ್ಳುವ ರೀತಿ ನಾನು ಉತ್ತಮ ಕೆಲಸ ಮಾಡಿರುವುದಾಗಿ ಹೇಳಿದರು.
ಭ್ರಷ್ಟಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡಿದರೇ ದೇಶ ಮತ್ತು ಜನರು ಎಲ್ಲಾ ಉದ್ಧಾರವಾಗುತ್ತಾರೆ. ಅಂದಿನ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಕಲ್ಪನೆ ಇಂದು ಕಣ್ಮರೆಯಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಎಂಬುದನ್ನು ನೀಡಬೇಕು. ಅತಿ ಹೆಚ್ಚು ಅವಿದ್ಯಾವಂತರು ನಮ್ಮ ಜನಾಂಗದಲ್ಲಿ ಇದ್ದಾರೆ. ಈ ಬಗ್ಗೆ ಚಿಂತನೆ ಮಾಡಿ ಪ್ರಶ್ನೆ ಮಾಡಿಕೊಂಡರೇ ಉತ್ತರ ಸಿಗುತ್ತದೆ ಎಂದು ಸಲಹೆ ನೀಡಿದರು.