ಹಾಸನ: ಪ್ರಧಾನಿ ಈಗಾಗಲೇ ಎರಡು ಕಂಟಕದಿಂದ ಬಚಾವಾಗಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯಂತೆ ಪ್ರಧಾನಮಂತ್ರಿ ಮೋದಿಗೂ ಮುಂದೆ ಅಪಾಯ ಎದುರಾಗಬಹುದು ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.
ಅಧಿದೇವತೆ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಅವರ ರಕ್ಷಣೆಗಾಗಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವುದು ಸೂಕ್ತ. ಇಲ್ಲವಾದರೆ ಅಪಾಯ ಶತಃಸಿದ್ಧ ಎಂದರು.
ಪ್ರಧಾನಿ ಮೋದಿಯವರು ಇನ್ನು ಮುಂದೆಯಾದರೂ ತಾಯಿ ಅಥವಾ ಪತ್ನಿಯೊಂದಿಗೆ ಇರಬೇಕೆಂದು ನಾವು ಸಲಹೆ ನೀಡುತ್ತೇವೆ. ಮುಂದಿನ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಬಯಸಿದರೂ ಅವರನ್ನು ಪ್ರಧಾನಿ ಮಾಡಲು ಅವರ ಪಕ್ಷದವರೇ ಒಪ್ಪೋದಿಲ್ಲ. ಸ್ವಪಕ್ಷೀಯರೇ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಾರದೆಂದು ಸಂಚು ರೂಪಿಸಿದ್ದಾರೆ ಎಂದು ನರೇಂದ್ರ ಶರ್ಮಾ ಗಂಭೀರ ಆರೋಪ ಮಾಡಿದರು.
ಇದರ ಜೊತೆಗೆ ಮುಂದಿನ ವರ್ಷ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಶತಃಸಿದ್ಧ. ಇನ್ನೂ ಮೂವರು ಮುಖ್ಯಮಂತ್ರಿಗಳು ಬರುವುದರೊಳಗೆ ಕರ್ನಾಟಕ ಇಬ್ಭಾಗ ಆಗುತ್ತಂತೆ. ಮೂರನೇ ಮಹಾಯುದ್ಧ ಸಹ ನಡೆಯುತ್ತೆ ಅಂತ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಭಾರತ ಮೂಲದ 6 ಮಂದಿ ವಿದೇಶದಲ್ಲೂ ಆಳ್ವಿಕೆ ನಡೆಸುತ್ತಾರೆ ಎಂದು ಭವಿಷ್ಯ ನುಡಿದರು.
ನರೇಂದ್ರ ಮೋದಿಯ ಅವಧಿಯೂ ಕೂಡ ಮುಕ್ತಾಯವಾಗುವ ಸನಿಹ ಬಂದಿದೆ. ಮೂರನೇ ಮಹಾಯುದ್ಧವು ಕೂಡ ನಡೆಯುತ್ತದೆ. ಮುಂದಿನ 13 ವರ್ಷಗಳ ಕಾಲ ದೇಶದಲ್ಲಿ ಆಹಾರದ ಕೊರತೆ ಉಂಟಾಗಿ ಹಸಿವಿನ ಕ್ಷಾಮ ತಲೆದೋರಲಿದೆ. ಹೀಗಾಗಿ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಭ್ರಷ್ಟಾಚಾರ ಬಿಟ್ಟು ಧರ್ಮ ಮಾರ್ಗದಲ್ಲಿ ನಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.