ಹಾಸನ :ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉನ್ನತಮಟ್ಟದ ತನಿಖೆ ಆಗಬೇಕೆಂದು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಗ್ರಹ ಮಾಡಿದರು.
ಅರಸೀಕೆರೆಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಚಂದ್ರಪಟ್ಟಣದ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಣ್ ನಮ್ಮ ಸಂಬಂಧಿಕ. ಈಗಾಗಲೇ ರೇವಣ್ಣ ಮತ್ತು ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಅವರು ಪಿಎಸ್ಐ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹ ಮಾಡಿದ್ದಾರೆ. ನಾನು ಕೂಡ ಆಗ್ರಹ ಮಾಡುತ್ತೇನೆ ಎಂದರು.
ಈಗಾಗಲೇ ನಾನು ಭ್ರಷ್ಟಾಚಾರದ ವಿರುದ್ಧ ವಿಧಾನಸಭೆಯಲ್ಲೂ ಕೂಡ ಧ್ವನಿಯೆತ್ತಿದ್ದೇನೆ. ಪಾಪದ ಕೊಡ ತುಂಬಿದಾಗ ದೇವರು ಕ್ಷಮಿಸಲ್ಲ. ಈ ಪ್ರಕರಣದಲ್ಲಿ ನಾನು ಧ್ವನಿ ಎತ್ತದೆ ಇರುವುದಿಲ್ಲ. ನಾನು ನಿನ್ನೆ ಅಂತ್ಯಕ್ರಿಯೆ ವೇಳೆ ಭಾಗಿಯಾಗಿದ್ದ ಐಜಿಯವರಿಗೆ ವಿನಂತಿ ಮಾಡಿದ್ದೇನೆ. ಇದರ ಸತ್ಯಾಸತ್ಯತೆ ಹೊರಗಡೆ ಬರಬೇಕು. ಪಿಎಸ್ಐ ಸಾವಿಗೆ ಒಬ್ಬ ಮೇಲಾಧಿಕಾರಿಯ ಕಿರುಕುಳವೇ ಕಾರಣ ಎಂಬುದು ಸಾರ್ವಜನಿಕರು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಲೇಬೇಕೆಂದು ಆಗ್ರಹ ಮಾಡಿದರು.