ಅರಕಲಗೂಡು : ತಾಲೂಕು ಪಂಚಾಯತ್ ಕ್ಷೇತ್ರ ವಿಂಗಡಣೆಯಲ್ಲಿ ಮಾರ್ಗಸೂಚಿಯನ್ನು ಪರಿಗಣಿಸದೆ ಗುರುತರ ಲೋಪವನ್ನು ಚುನಾವಣಾ ಅಧಿಕಾರಿಗಳು ಮಾಡಿದ್ದಾರೆ ಎಂದು ಶಾಸಕ ಎ ಟಿ ರಾಮಸ್ವಾಮಿ ಆರೋಪಿಸಿದ್ದಾರೆ.
ಕ್ಷೇತ್ರ ವಿಂಗಡಣೆ ನಿಷ್ಪಕ್ಷಪಾತವಾಗಿರಬೇಕು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಜನಸಂಖ್ಯೆ ಒಂದು ಕ್ಷೇತ್ರಕ್ಕೂ ಮತ್ತೊಂದು ಕ್ಷೇತ್ರಕ್ಕೆ ಅಜಾಗಜಾಂತರ ವ್ಯತ್ಯಾಸ ಮಾಡಲಾಗಿದೆ. ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ವಿಂಗಡಣೆ ಮಾಡುವಾಗ ಪಕ್ಕದ ಗ್ರಾಮ ಪಂಚಾಯತ್ ಪರಿಗಣಿಸದೆ ಜಂಪ್ ಮಾಡಿಸಿ ದೂರದ ಪಂಚಾಯತ್ ಸೇರಿಸಲಾಗಿದೆ.
ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಚುನಾವಣಾ ಅಧಿಕಾರಿಗಳು, ಕರ್ತವ್ಯ ಲೋಪವೆಸಗಿದ್ದಾರೆ. ದುರುದ್ದೇಶದಿಂದ ಕ್ಷೇತ್ರ ವಿಂಗಡಣೆ ಮಾಡಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಹಾಳು ಮಾಡಲು ಹೊರಟಿದ್ದಾರೆ. ಸಂವಿಧಾನ ಸೂತ್ರಗಳನ್ನು ಗಾಳಿಗೆ ತೂರಿ ಕ್ಷೇತ್ರ ವಿಂಗಡಣೆ ಮಾಡಿದ್ದಾರೆ. ಸಂವಿಧಾನಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ಇವರ ಮೇಲೆ ತಾಲೂಕು, ಜಿಲ್ಲೆ, ರಾಜ್ಯದ ಚುನಾವಣಾ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ತಾಪಂ ಕ್ಷೇತ್ರ ವಿಂಗಡಣೆ ಮಾಡುವಾಗ ರಾಮನಾಥಪುರ ತಾಪಂ ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ ಗಂಗೂರು ಅಥವಾ ಬಸವಾಪಟ್ಟಣವನ್ನು ಸೇರ್ಪಡೆ ಮಾಡದೇ ರುದ್ರಪಟ್ಟಣವನ್ನು ಸೇರ್ಪಡೆ ಮಾಡಲಾಗಿದೆ. ಸಮೀಪದ ಗ್ರಾಪಂಗಳನ್ನು ಬಿಟ್ಟು ದೂರದ ಗ್ರಾಪಂಗಳನ್ನ ಸೇರ್ಪಡೆ ಮಾಡಿರುವ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.