ETV Bharat / state

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಪ್ರೀತಂ ಗೌಡ ಭೇಟಿ: ಶೀಘ್ರ ಪರಿಹಾರದ ಭರವಸೆ - ಹಾಸನಕ್ಕೆ ಪ್ರೀತಂ ಗೌಡ ಭೇಟಿ

ಇಂದಿನಿಂದಲೇ 62 ಹೊಸ ಮನೆಗಳ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಬಿಜೆಪಿ ಶಾಸಕ ಪ್ರೀತಂ ಗೌಡ ಭರವಸೆ ನೀಡಿದರು.

MLA Preetham Gowda visits to rain affected area in Hassan
ಮಳೆ ಹಾನಿ ಪ್ರದೇಶಕ್ಕೆ ಶಾಸಕ ಪ್ರೀತಂ ಗೌಡ ಭೇಟಿ
author img

By

Published : Jul 17, 2022, 7:20 AM IST

ಹಾಸನ: ಕಳೆದ ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಹಾಸನ ನಗರ ಸೇರಿದಂತೆ ಕ್ಷೇತ್ರದಲ್ಲಿ ಅನೇಕ ಮನೆಗಳು ಕುಸಿದಿವೆ. ನೂರಾರು ಮನೆಗಳು ಬೀಳುವ ಹಂತದಲ್ಲಿವೆ. ನಿನ್ನೆ(ಶನಿವಾರ) ಶಾಸಕ ಪ್ರೀತಂ ಜೆ.ಗೌಡ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ತಾಲೂಕು ಆಡಳಿತಾಧಿಕಾರಿಗಳೊಂದಿಗೆ ಮಳೆಯಲ್ಲಿಯೇ ತೆರಳಿ ಪರಿಶೀಲಿಸಿದ ಅವರು ತಾತ್ಕಾಲಿಕವಾಗಿ ಉಳಿದುಕೊಳ್ಳಲು ಬದಲಿ ವ್ಯವಸ್ಥೆ ಮಾಡಿದರು. ಅಲ್ಲದೇ ಇಂದಿನಿಂದಲೇ 62 ಹೊಸ ಮನೆಗಳ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಭರವಸೆ ಕೊಟ್ಟರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಿರಂತರ ಮಳೆಯಿಂದ ಮೋಚಿ ಕಾಲೋನಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಅನೇಕ ಮನೆಗಳು ಕುಸಿದಿವೆ. ಅನೇಕರು ತಮ್ಮ ಸೂರು ಕಳೆದುಕೊಂಡಿದ್ದಾರೆ. ಮನೆಗಳು ಬಿದ್ದಿರುವ ಸ್ಥಳಗಳಿಗೆ ತಹಶೀಲ್ದಾರ್ ನಟೇಶ್, ನಗರಸಭೆ ಅಧ್ಯಕ್ಷ ಮೋಹನ್, ಆಯುಕ್ತ ಪರಮೇಶ್ವರಪ್ಪ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಕ್ರಮವಹಿಸುತ್ತಿದ್ದಾರೆ" ಎಂದರು.

"ಶನಿವಾರ 8ಕ್ಕೂ ಹೆಚ್ಚು ಮನೆಗಳು ಕುಸಿದಿರುವುದರ ಬಗ್ಗೆ ಮಾಹಿತಿ ಬಂದಿದೆ. ಎಲ್ಲಾ ಸ್ಥಳಗಳನ್ನು ವೀಕ್ಷಿಸಿ ಸೂಕ್ತ ಪರಿಹಾರಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ. ಪೆನ್ಷನ್ ಮೊಹಲ್ಲಾ ಭಾಗದ ಮೋಚಿ ಕಾಲೋನಿ, ಸೇರಿದಂತೆ ಇತರೆ ಮನೆಗಳನ್ನು ಸ್ಲಂ ಬೋರ್ಡ್​ವತಿಯಿಂದ ನಿರ್ಮಾಣ ಮಾಡಲಾಗಿದ್ದು, ಶೀಘ್ರವೇ ಪ್ರಾರಂಭ ಮಾಡಲಾಗುವುದು".

"ಇನ್ನೊಂದು ವಾರ ಮಳೆ ಇದೆ ರೀತಿ ಸುರಿದರೆ ಹಳೆಯ ಎಲ್ಲಾ ಮನೆಗಳು ಸಹ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಬಿದ್ದಿರುವ ಮನೆಗಳನ್ನು ಸೇರಿದಂತೆ ಕುಸಿದು ಬೀಳುವ ಹಂತದಲ್ಲಿರುವ ಎಲ್ಲಾ ಶಿಥಿಲಗೊಂಡಿರುವ ಮನೆಗಳನ್ನು ವೀಕ್ಷಣೆ ಮಾಡಿ ಅಷ್ಟು ಮನೆಗಳನ್ನು ಸ್ಥಳಾಂತರಗೊಳಿಸಲಾಗುವುದು. ಭಾನುವಾರದಿಂದ(ಇಂದಿನಿಂದ) ಹೊಸ ಮನೆ ಕಾಮಗಾರಿ ಕೆಲಸವನ್ನು ಪ್ರಾರಂಭಿಸಲಾಗುವುದು" ಎಂದು ತಿಳಿಸಿದರು.

ಮನೆ ನಿರ್ಮಿಸುವವರೆಗೂ ತಾತ್ಕಾಲಿಕವಾಗಿ ಇರಲು ಶಾದಿಮಹಲ್ ಇಲ್ಲವೇ, ಗಂಜಿ ಕೇಂದ್ರಗಳಿಗೆ ಕಳುಹಿಸಲು ತಾಲೂಕು ಆಡಳಿತ ನಿರ್ಧರಿಸುತ್ತದೆ. ಅಲ್ಲಿಗೆ ಸ್ಥಳಾಂತರಗೊಳಿಸಿ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳಲು ಸೂಚನೆ ಕೊಟ್ಟಿರುವುದಾಗಿ ಶಾಸಕರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.