ETV Bharat / state

ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ತ್ವರಿತ ಪರಿಹಾರ :ಶಾಸಕ ಕೆ.ಎಸ್.ಲಿಂಗೇಶ್ ಅಭಯ - flood effects

ಭಾರಿ ಮಳೆಯಿಂದಾಗಿ ಬೇಲೂರು ತಾಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, ಸಂತಸ್ರಸ್ತರಿಗೆ ತಾಲೂಕು ಆಡಳಿತದಿಂದ  ತ್ವರಿತವಾಗಿ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.

ಚೆಕ್​ ವಿತರಣೆ
author img

By

Published : Aug 16, 2019, 11:01 AM IST

ಹಾಸನ : ವರುಣನ ಆರ್ಭಟದಿಂದ ಬೇಲೂರು ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಹಾಗೂ 1,200 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ತ್ವರಿತವಾಗಿ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.

ಸಂತ್ರಸ್ತರಿಗೆ ಚೆಕ್​ ವಿತರಿಸಿದ ಶಾಸಕ ಕೆ.ಎಸ್.ಲಿಂಗೇಶ್

ಪಟ್ಟಣದಲ್ಲಿ ಕುಸಿದು ಬಿದ್ದಿದ್ದ ಮನೆಗಳ ಮಾಲೀಕರಿಗೆ ತಾಲೂಕು ಆಡಳಿತದಿಂದ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ನಿರಂತರ ಮಳೆಯಿಂದ ಪಟ್ಟಣದಲ್ಲಿ 25ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದರೆ, 18ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಈಗಾಗಲೇ ಪುರಸಭೆ ಎಂಜಿನಿಯರ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಷ್ಟದ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಸದ್ಯ ಮನೆಯ ನಿರ್ಮಾಣಕ್ಕೆ ತಾತ್ಕಾಲಿಕವಾಗಿ ಪರಿಹಾರ ನೀಡಲಾಗುತ್ತಿದೆ ಎಂದರು.

ಇದೇ ವೇಳೆ ತಹಸೀಲ್ದಾರ್ ನಟೇಶ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆ ಆರ್‌. ಐ ರವಿಕುಮಾರ್, ಗುಂಡಣ್ಣ ಹಾಜರಿದ್ದರು.

Intro:ಹಾಸನ : ವರುಣ ಆರ್ಭಟದಿಂದ ಬೇಲೂರು ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಹಾಗೂ 1200 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ತ್ವರಿತವಾಗಿ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
Body:ಪಟ್ಟಣದಲ್ಲಿ ಕುಸಿದು ಬಿದ್ದಿದ್ದ ಮನೆಗಳ ಮಾಲೀಕರಿಗೆ ತಾಲೂಕು ಆಡಳಿತದಿಂದ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ನಿರಂತರ ಮಳೆಯಿಂದ ಪಟ್ಟಣದಲ್ಲಿ 25ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದರೆ, 18ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಈಗಾಗಲೇ ಪುರಸಭೆ ಎಂಜಿನಿಯರ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಷ್ಟದ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಸದ್ಯ ಮನೆಯ ನಿರ್ಮಾಣಕ್ಕೆ ತಾತ್ಕಾಲಿಕವಾಗಿ ಪರಿಹಾರ ನೀಡಲಾಗುತ್ತಿದೆ ಎಂದರು.
Conclusion:ತಹಸೀಲ್ದಾರ್ ನಟೇಶ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆ ಆರ್‌ಐ ರವಿಕುಮಾರ್, ಗುಂಡಣ್ಣ ಹಾಜರಿದ್ದರು.

-ಅರಕೆರೆ ಮೋಹನಕುಮಾರ,ಈಟಿವಿಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.