ETV Bharat / state

ಕಾಂಗ್ರೆಸ್​ ಎಂಬ ರೈಲಿಗೆ ಇಂಜಿನ್​ ಇಲ್ಲ: ಸಚಿವ R Ashok​ ವ್ಯಂಗ್ಯ - ಹಾಸನಕ್ಕೆ ಸಚಿವ ಅಶೋಕ್​ ಭೇಟಿ

ಕಾಂಗ್ರೆಸ್​ನಲ್ಲಿ ದಲಿತ - ಹಿಂದುಳಿದ, ಒಕ್ಕಲಿಗ, ಲಿಂಗಾಯಿತ ಎಂದು 4 ಭಾಗವಾಗಿದೆ. ಹೀಗಿರುವಾಗ ಕಾಂಗ್ರೆಸ್​ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಕಂದಾಯ ಸಚಿವ ಆರ್.​ ಅಶೋಕ್​ ವ್ಯಂಗ್ಯವಾಡಿದ್ದಾರೆ.

Minister R Ashok
ಸಚಿವ ಆರ್.​ ಅಶೋಕ್
author img

By

Published : Jun 30, 2021, 3:42 PM IST

ಹಾಸನ: ಕಾಂಗ್ರೆಸ್​ನಲ್ಲಿ ಇಲ್ಲದಿರುವ ಕುರ್ಚಿಗೆ ಟವೆಲ್​ ಹಾಕ್ತಾರೆ. ಅವರ ರೈಲು ಇನ್ನೂ ಸಹ ಹಳಿಗೆ ಬಂದಿಲ್ಲ. ಮುಖ್ಯವಾಗಿ ಅದಕ್ಕೆ ಇಂಜಿನ್​ ಹಾಗೂ ಡ್ರೈವರ್​ ಇಲ್ಲ ಎಂದು ಕಂದಾಯ ಸಚಿವ ಆರ್.​ ಅಶೋಕ್​ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ - ಹಿಂದುಳಿದ, ಒಕ್ಕಲಿಗ, ಲಿಂಗಾಯಿತ ಎಂದು 4 ಭಾಗ ಮಾಡಿಕೊಂಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಇನ್ನು ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡುವುದಾದರೆ, ಅವರು ನಮ್ಮ ಪಕ್ಷದಲ್ಲಿಯೇ ಇರುತ್ತಾರೆ. ಈ ಬಗ್ಗೆ ಸ್ಪಷ್ಟನೆಯನ್ನೂ ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: 'ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ': ಮೈಸೂರಲ್ಲಿ ಮಾರ್ದನಿಸಿತು ಅಭಿಮಾನಿಗಳ ಘೋಷಣೆ

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಇಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು. ಇನ್ನು ಎರಡು ವರ್ಷ ಅವರೇ ಮುಂದುವರಿಯಲಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ನಿರ್ವಹಣೆ ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ದೇಶದಲ್ಲಿ ವ್ಯಾಕ್ಸಿನೇಷನ್ ಹಾಕುವುದರಲ್ಲೇ ರಾಜ್ಯ ಮುಂಚೂಣಿಯಲ್ಲಿದೆ. ಡಿಸೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಡಬಲ್ ಡೋಸ್ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತದೆ. ದಿನದಿಂದ ದಿನಕ್ಕೆ ಜಿಲ್ಲೆಗಳಿಗೆ ಹೆಚ್ಚು ವ್ಯಾಕ್ಸಿನ್ ನೀಡುವ ಗುರಿ ಇದೆ ಎಂದರು.

ಇನ್ನು ಎರಡನೇ ಅಲೆಯ ಟಾಸ್ಕ್ ಪೋರ್ಸ್ ರದ್ದುಮಾಡಿ ಮೂರನೇ ಅಲೆಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.