ಬೇಲೂರು,(ಹಾಸನ) : ಪಕ್ಷದಲ್ಲಿ ಆಂತರಿಕ ಗೊಂದಲ ಇರುವುದು ಸಹಜ. ಆದರೆ, ಬೇರೆ ಪಕ್ಷಗಳಲ್ಲಿ ಇರುವಂತಹ ಗೊಂದಲ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟಪಡಿಸಿದರು.
ರಾಜ್ಯ ರಾಜಕೀಯದಲ್ಲಿ ವಿಪ್ಲವ ನಡೆಯುತ್ತಿದೆ ಎಂಬ ಮಾತಿಗೆ ಅವರು ಮಾತನಾಡಿ, ಎಲ್ಲ ಪಕ್ಷದಲ್ಲೂ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ನಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ಚರ್ಚೆ ನಡೆಸಿ ಗೊಂದಲ ಸರಿಪಡಿಸಿಕೊಳ್ಳುತ್ತೇವೆ.
ಬೇಲೂರು ಪ್ರವಾಸೋದ್ಯಮ ಪಟ್ಟಿಗೆ ಸೇರಿಸಿ ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂದು ಪ್ರವಾಸೋದ್ಯಮ ಸಚಿವರಾಗಿದ್ದ ಸಿ ಟಿ ರವಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಸ್ಥಾನ ತೆರವಾಗಿರುವುದರಿಂದ ಬಜೆಟ್ ಅಧಿವೇಶನ ಮುಗಿದ ನಂತರ ಬೇಲೂರು ಮತ್ತು ಹಾಸನ ಜಿಲ್ಲೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಬೇಲೂರು ತಾಲೂಕಿನ ರೈತಾಪಿ ವರ್ಗಕ್ಕೆ ಯಾವುದೇ ತೊಂದರೆಯಾಗದ ರೀತಿ ಸರ್ಕಾರ ನೋಡಿಕೊಳ್ಳಲಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರಚನೆಯಾಗಿತ್ತು. ಅವರಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ನಮ್ಮ ಸರ್ಕಾರ ತಕ್ಷಣ ಪರಿಹಾರ ನೀಡುವ ಕಾರ್ಯ ಮಾಡುತ್ತದೆ.
ಹಾಗೆ ಹಳೇಬೀಡು ಕೆರೆ ಬಿರುಕು ಬಿಟ್ಟಿರುವುದನ್ನು ಸರಿಪಡಿಸುವ ಕಾರ್ಯವಾಗುತ್ತಿದೆ. ನೀರನ್ನ ಹೊರಗೆ ಬಿಡದಿದ್ದರೆ ಕೆರೆಗೆ ಅಪಾಯವಿರುವುದರಿಂದ ತಾಂತ್ರಿಕ ಸಲಹೆ ಪಡೆದು ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಗೋಪಾಲಯ್ಯ ಸ್ಪಷ್ಟನೆ