ETV Bharat / state

ಅಪಾಯಕಾರಿ ಕೆರೆ ಏರಿಗಳನ್ನು ಪರಿಶೀಲನೆ ನಡೆಸಿದ ಸಚಿವ ಸಿ.ಟಿ. ರವಿ, ಮಾಧುಸ್ವಾಮಿ - ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮ

ಹಾಸನ ಜಿಲ್ಲೆಯ ಅಪಾಯಕಾರಿಯಾಗಿ ಬಿರುಕುಬಿಟ್ಟಿರುವ ಕೆರೆಗಳ ಏರಿಗಳನ್ನು ಸಚಿವ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಪರಿಶೀಲಿಸಿದ್ರು. ತಾಂತ್ರಿಕತೆಗಳನ್ನು ಬಳಸಿ ಕೆರೆ ಏರಿ ಕೊಚ್ಚಿ ಹೋಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಅಪಾಯಕಾರಿ ಕೆರೆ ಏರಿಗಳನ್ನು ಪರಿಶೀಲನೆ ನಡೆಸಿದ ಸಚಿವ ಸಿ.ಟಿ. ರವಿ, ಮಾಧುಸ್ವಾಮಿ
author img

By

Published : Aug 23, 2019, 12:58 PM IST

ಹಾಸನ: ಸಚಿವ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಪಾಯಕಾರಿ ಕೆರೆ ಏರಿಗಳನ್ನು ಪರಿಶೀಲನೆ ನಡೆಸಿದ ಸಚಿವ ಸಿ.ಟಿ. ರವಿ, ಮಾಧುಸ್ವಾಮಿ

ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಕೆರೆ ಏರಿಗಳನ್ನು ಪರಿಶೀಲಿಸಿದ ಅವರು, ಕೃಷಿಕರಿಗೆ, ಜನಸಾಮಾನ್ಯರಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂಬಂಧ ತಾಂತ್ರಿಕತೆಗಳನ್ನು ಬಳಸಿ ಕೆರೆ ಏರಿ ಕೊಚ್ಚಿ ಹೋಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

Intro:ಹಾಸನ : ಸಚಿವ ಸಿಟಿ ರವಿ ಮತ್ತು ಮಾಧುಸ್ವಾಮಿ ಜಿಲ್ಲೆಯಲ್ಲಿ ವಿವಿಧ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಗಳ ಪರಿಶೀಲನೆ ನಡೆಸಿದರು.

ರಸ್ತೆಗಳ ಹಾನಿ, ಬಾರೆ ಕುಸಿತ, ಕಾಫಿ, ಮೆಣಸು, ಏಲಕ್ಕಿ ಮತ್ತಿತರ ಬೆಳೆ ಹಾನಿ, ಮನೆಗಳ ಕುಸಿತಗಳನ್ನು ವೀಕ್ಷಿಸಿದ ಸಚಿವರು ತಕ್ಷಣದ ಹಾಗೂ ದೀರ್ಘಕಾಲದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Body:ಸಚಿವ ಸಿಟಿ ರವಿ ಹಾಗೂ ಮಾಧುಸ್ವಾಮಿ ಅವರು ಹಾನುಬಾಳು ಗ್ರಾಮದ ಸ್ಥಳೀಯ ಜನಪ್ರತಿನಿಧಿಗಳು ಬೆಳಗಾರರ ಅಹವಾಲುಗಳನ್ನು ಆಲಿಸಿದರು.

ಗುಂಡಣಕೆರೆ, ಹೆಗ್ಗದ್ದೆಗಳಲ್ಲಿ ಉಂಟಾಗಿರುವ ತೀವ್ರ ಭೂ ಕುಸಿತವನ್ನು ವೀಕ್ಷಿಸಿದರು. ಪ್ರತಿವರ್ಷ ಇದೇ ರೀತಿಯ ಬರೆ ಕುಸಿತ ಉಂಟಾಗುತ್ತಿರುವ ಗಮನಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಕಡಿಮೆ ಮಾಡಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಸಚಿವರು ಹೇಳಿದರು.

ಅತಿವೃಷ್ಟಿಯ ತುರ್ತು ಪರಿಹಾರ ಕ್ರಮಗಳನ್ನು ಜಿಲ್ಲಾಡಳಿತ ಯಾವುದೇ ಹಣಕಾಸಿನ ಕೊರತೆ ಇಲ್ಲ.‌ ಮುಂದಿನ ದಿನಗಳಲ್ಲಿ ಹಂತಹಂತವಾಗಿ ರಸ್ತೆ ಕಟ್ಟಡಗಳ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಸಿಟಿ ರವಿ ಹೇಳಿದರು.

ಸ್ಥಳಿಯ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವುದು ಪ್ರಯತ್ನಿಸುವುದಾಗಿ ಸಚಿವ ಮಾಧುಸ್ವಾಮಿ ಮತ್ತು ಸಿಟಿ ರವಿ ತಿಳಿಸಿದರು.

ಕಾಫಿ ಹಾಗೂ ಸಾಂಬಾರ ಮಂಡಳಿ ಅಧಿಕಾರಿಗಳು ಸ್ಥಳೀಯವಾಗಿ ಸಮಸ್ಯೆಗಳನ್ನು ಪರಿಶೀಲಿಸಿ ಲಭ್ಯವಿರುವ ಪರಿಹಾರ ಒದಗಿಸಿ ಹಾಗೂ ಅಗತ್ಯ ನೆರವು ಒದಗಿಸುವಂತೆ ತಿಳಿಸಿದರು.

Conclusion:ಮೈಲಹಳ್ಳಿ ಕೆರೆ ಏರಿ ಪರಿಶೀಲನೆ :

ಸಚಿವ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಅವರು ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗಳೂರು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಕೆರೆಯನ್ನು ಪರಿಶೀಲಿಸಿದರು.

ಕೃಷಿಕರಿಗೆ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಿ ತಾಂತ್ರಿಕತೆಗಳನ್ನು ಬಳಸಿ ಏರಿಯನ್ನು ಕೊಚ್ಚಿ ಹೋಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.