ETV Bharat / state

ಪಿಂಚಣಿ ಹಣ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ - ಟಿ‌.ಎನ್.ಕಾಳೇಗೌಡ

ಜಿಲ್ಲಾ ಸಹಕಾರ ಬ್ಯಾಂಕ್ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣ ಕೊಡಬೇಕೆಂದು ಹೆಚ್​ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ‌.ಎನ್.ಕಾಳೇಗೌಡ ತಿಳಿಸಿದರು.

ಹೆಚ್​ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ‌.ಎನ್.ಕಾಳೇಗೌಡ ನೇತೃತ್ವದ ಸುದ್ದಿಗೋಷ್ಠಿ
author img

By

Published : Mar 15, 2019, 9:13 PM IST

ಹಾಸನ: ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣ ಕೊಡದಿದ್ದರೆ ಡಿಸಿಸಿ ಬ್ಯಾಂಕ್ ಎದುರು ನೌಕರರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆಚ್​ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ‌.ಎನ್.ಕಾಳೇಗೌಡ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ 132 ನಿವೃತ್ತ ಬ್ಯಾಂಕ್ ನೌಕರರಿಗೆ ಪಿಂಚಣಿ ಹಣ ಕೊಟ್ಟಿಲ್ಲ. ನಿವೃತ್ತಿ ನಂತರ ಜೀವನವೇ ದುಸ್ಥರವಾಗಿದೆ. ಈಗಾಗಲೇ 21 ನಿವೃತ್ತ ನೌಕರರು ಮೃತಪಟ್ಟಿದ್ದಾರೆ. ಪಿಂಚಣಿ ಹಣ ಸಿಗದೆ ಹಲವು ಮಂದಿ ಜೀವನ ನಿರ್ವಹಣೆಗೆ ಪೆಟ್ರೋಲ್ ಬಂಕ್, ಕಸ ಗುಡಿಸುವುದು, ಹೋಟೆಲ್​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಕೊಡಬೇಕಾದ ಪಿಂಚಣಿ ಹಣ ಕೇಳಲು ಮುಂದಾದರೆ ಬ್ಯಾಂಕ್​ನ ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್​ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ‌.ಎನ್.ಕಾಳೇಗೌಡ ನೇತೃತ್ವದ ಸುದ್ದಿಗೋಷ್ಠಿ

ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣವನ್ನ ತಮ್ಮಲ್ಲೇ ಇಟ್ಟುಕೊಂಡು (ಕಾರ್ಪ್) ಅದರಿಂದ ಬರುವ ಬಡ್ಡಿಯಿಂದ ಪಿಂಚಣಿ ನೀಡುವಂತೆ ಸ್ಪಷ್ಟಪಡಿಸಿದೆ. ಹೀಗಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಳಿ ವಯಸ್ಸಿನಲ್ಲಿ ಕೂಲಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಕೆಲವು ಮಕ್ಕಳು ಪೋಷಕರನ್ನು ಮನೆಯಿಂದ ಓಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Intro:ಪಿಂಚಣಿ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ; ಕಾಳೇಗೌಡ ಎಚ್ಚರಿಕೆ

ಹಾಸನ: ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣ ಕೊಡದಿದ್ದರೆ ಡಿಸಿಸಿ ಬ್ಯಾಂಕ್ ಎದುರು ನೌಕರರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆಚ್ ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ‌.ಎನ್.ಕಾಳೇಗೌಡ ಎಚ್ಚರಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ 132 ನಿವೃತ್ತ ಬ್ಯಾಂಕ್ ನೌಕರರಿಗೆ ಪಿಂಚಣಿ ಹಣ ಕೊಟ್ಟಿಲ್ಲ. ನಿವೃತ್ತಿ ನಂತರ ಜೀವನವೇ ದುಸ್ತರವಾಗಿದೆ.ಈಗಾಗಲೇ 21 ನಿವೃತ್ತ ನೌಕರರು ಮೃತಪಟ್ಟಿದ್ದಾರೆ. ಪಿಂಚಣಿ ಹಣ ಸಿಗದೆ ಹಲವು ಮಂದಿ ಜೀವನ ನಿರ್ವಹಣೆಗೆ ಪೆಟ್ರೋಲ್ ಬಂಕ್, ಕಸ ಗುಡಿಸುವುದು, ಹೊಟೇಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಕೊಡಬೇಕಾದ ಪಿಂಚಣಿ ಹಣ ಕೇಳಲು ಮುಂದಾದರೆ ಬ್ಯಾಂಕ್ ನ ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2001 ರಿಂದ ಬ್ಯಾಂಕ್ ಆದಾಯದಲ್ಲಿ ನಡೆಯುತ್ತಿದ್ದ. ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣವನ್ನೇ ತಮ್ಮಲ್ಲೇ ಇಟ್ಟುಕೊಂಡು (ಕಾರ್ಪ್) ಅದರಿಂದ ಬರುವ ಬಡ್ಡಿಯಿಂದ ಪಿಂಚಣಿ ನೀಡುವಂತೆ ಸ್ಪಷ್ಟಪಡಿಸಿದೆ. ಹೀಗಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಳಿ ವಯಸ್ಸಿನಲ್ಲಿ ಕೂಲಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಕೆಲವು ಮಕ್ಕಳು ಪೋಷಕರನ್ನು ಮನೆಯಿಂದ ಓಡಿಸಿದ್ದಾರೆ ಎಂದು ಅಲವತ್ತುಗೊಂಡರು.

ರಾಜ್ಯದ ಹಲವು ಸಹಕಾರಿ ಬ್ಯಾಂಕ್ ಗಳಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಲಾಗುತ್ತಿದೆ. ನಿವೃತ್ತ ನೌಕರರಿಗೆ ಪಿಂಚಣಿ ನೀಡುವಂತೆ ಹೈ ಕೋರ್ಟ್ ಸೂಚಿಸಿದ್ದರೂ ಈ ತೀರ್ಪಿಗೂ ಇಲ್ಲಿನ ಬ್ಯಾಂಕ್ ಆಡಳಿತ ಮಂಡಳಿ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.