ETV Bharat / state

ಹಾಸನ: ಶಿಕಾರಿಗೆ ಜೊತೆಗೂಡಿ ಹೊರಟು ಪ್ರಾಣಸ್ನೇಹಿತನಿಗೆ ಗುಂಡಿಕ್ಕಿದ! - ಹಾಸನ ಲೆಟೆಸ್ಟ್ ನ್ಯೂಸ್

ಪ್ರಾಣಸ್ನೇಹಿತರಿಬ್ಬರು ಕಳೆದ ರಾತ್ರಿ ಮಾತನಾಡಿಕೊಂಡು ಶಿಕಾರಿಗೆ ಹೊರಟಿದ್ದಾರೆ. ಬಳಿಕ ಅವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಓರ್ವ ಮತ್ತೋರ್ವನಿಗೆ ಗುಂಡಿಕ್ಕಿ ಪರಾರಿಯಾಗಿದ್ದಾನೆ. ಗಾಯಾಳುವಿಗೆ ಚಿಕಿತ್ಸೆ ಮುಂದುವರೆದಿದೆ.

man shoots his close friend in hassan
ಪ್ರಾಣಸ್ನೇಹಿತನಿಗೇನೆ ಗುಂಡಿಕ್ಕಿದ ಸ್ನೇಹಿತ
author img

By

Published : Jun 6, 2021, 1:14 PM IST

ಹಾಸನ: ಅವರಿಬ್ಬರು ಬಾಲ್ಯ ಸ್ನೇಹಿತರು. ಏನೇ ಕೆಲಸ ಮಾಡಬೇಕಾದರೂ ಜತೆಗೂಡಿ ಮಾಡುತ್ತಿದ್ದರಂತೆ. ಆದ್ರೆ ನಿನ್ನೆ ಅವರಿಬ್ಬರ ನಡುವೆ ನಡೆದ ಗಲಾಟೆ ತಾರಕಕ್ಕೇರಿದೆ. ಪರಿಣಾಮ, ಪ್ರಾಣಕ್ಕೆ ಪ್ರಾಣವಾಗಿದ್ದ ಸ್ನೇಹಿತನ ಮೇಲೆ ಮತ್ತೊಬ್ಬ ಸ್ನೇಹಿತ ಗುಂಡು ಹಾರಿಸಿದ್ದಾನೆ. ಈ ಘಟನೆ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ನಡೆದಿದೆ.

ರವಿ ಮತ್ತು ಶಾಂತಕುಮಾರ್ ಬಾಲ್ಯದಿಂದಲೂ ಗೆಳೆಯರು. ಕೋವಿಡ್-19ರ ಸಂದರ್ಭದಲ್ಲಿ ಮನೆಯಲ್ಲಿದ್ದು, ಬೇಜಾರಾಗಿದ್ದ ಇವರಿಬ್ಬರು ಕಳೆದ ರಾತ್ರಿ ಮಾತನಾಡಿಕೊಂಡು ಶಿಕಾರಿಗೆ ಹೊರಟಿದ್ದಾರೆ. ಬೇಟೆಗೆ ತೆರಳಿದ್ದ ಇಬ್ಬರು ಸ್ನೇಹಿತರ ನಡುವೆ ಯಾವ ವಿಚಾರಕ್ಕೆ ಗಲಾಟೆ ನಡೆಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತೆರಳಿ, ರವಿ ಎನ್ನುವಾತ ತನ್ನ ಸ್ನೇಹಿತ ಶಾಂತಕುಮಾರ್ ಮೇಲೆ ಗುಂಡು ಹಾರಿಸಿ ಕ್ರೌರ್ಯ ಮೆರೆದಿದ್ದಾನೆ. ನಂತರ ಸ್ಥಳದಿಂದ ರವಿ ಪರಾರಿಯಾಗಿದ್ದಾನೆ.

ರವಿ ಹೊಡೆದ ಗುಂಡು ತಪ್ಪಿ ಕಾಲಿಗೆ ತಗುಲಿ ಶಾಂತಕುಮಾರ್ ಅಸ್ವಸ್ಥನಾಗಿದ್ದ. ಗುಂಡಿನ ಶಬ್ಧ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್. ನಂದಿನಿ ಮತ್ತು ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಬಗ್ಗೆ ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕುವುದಿಲ್ಲ: ಸಿ.ಪಿ.ಯೋಗೇಶ್ವರ್

ಸದ್ಯ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ವೈಡಿಆರ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.