ETV Bharat / state

ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ​​.. ಸದ್ಯ ಟೋಲ್​ಗೆ ಬ್ರೇಕ್​! - ಹಾಸನ- ಪಿರಿಯಾಪಟ್ಟಣ ರಸ್ತೆ ಮಾರ್ಗ

ಈ ಹಿಂದೆ ಈಟಿವಿ ಭಾರತ ಅವೈಜ್ಞಾನಿಕ ಮತ್ತು ಮೂಲ ಸೌಕರ್ಯವಿಲ್ಲದೇ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ವರದಿ ಮಾಡಿದ್ದ ಹಿನ್ನೆಲೆ ಡಿ.27ರಂದು ಸ್ಥಳೀಯರು ಮತ್ತು ಸಂಘ ಸಂಸ್ಥೆಯವರು ಬೃಹತ್ ಪ್ರತಿಭಟನೆ ಮಾಡಿದ್ದರಿಂದ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಬ್ರೇಕ್ ಬಿದ್ದಿತ್ತು.

ಸದ್ಯ ಟೋಲ್​ಗೆ ಬ್ರೇಕ್​
ಸದ್ಯ ಟೋಲ್​ಗೆ ಬ್ರೇಕ್​
author img

By

Published : Jan 20, 2020, 11:30 PM IST

ಹಾಸನ/ಅರಕಲಗೂಡು: ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗ ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸುವವರೆಗೂ ಟೋಲ್‌ ಸಂಗ್ರಹಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ..

ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಹಾಸನ-ಪಿರಿಯಾಪಟ್ಟಣ ರಸ್ತೆ ಮಾರ್ಗದಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರೋಧಿಸಿ ಕಳೆದ ತಿಂಗಳು ಟೋಲ್ ವಸೂಲಿ ಮಾಡದಂತೆ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಸರಿಪಡಿಸುವ ತನಕ ಟೋಲ್ ವಸೂಲಿ ಕೈಬಿಡಲು ಸೂಚಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆ ಧಿಕ್ಕರಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ರಸ್ತೆ ಹಾದುಹೋಗಿರುವ ಮಾರ್ಗ ಹಾಸನ, ಸಕಲೇಶಪುರ, ಪಿರಿಯಾಪಟ್ಟಣ, ಅರಕಲಗೂಡು ವ್ಯಾಪ್ತಿಯ ನಾಲ್ವರು ಶಾಸಕರಿಗೆ ಒಳಪಡುತ್ತದೆ. ಜನರಿಂದ ಆಯ್ಕೆಯಾದ ಶಾಸಕರು ಜನರು ನಡೆಸುತ್ತಿರುವ ಪ್ರತಿಭಟನೆ, ಮನವಿಗೆ ಬೆಲೆ ಕೊಡದೇ ಆಮಿಷಕ್ಕೆ ಒಳಗಾಗಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಸ್ತೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸುವವರೆಗೆ ಟೋಲ್ ಶುಲ್ಕ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.

Intro:ಹಾಸನ/ಅರಕಲಗೂಡು: ಮೂಲಸೌಕರ್ಯ ಮತ್ತು ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿರೋ ಹಿನ್ನಲೆಯಲ್ಲಿ ಅದನ್ನ ಸರಿಪಡಿಸುವ ತನಕ ಟೋಲ್ ಸಂಗ್ರಹಿಸಬಾರದು ಎಂದು ಆಗ್ರಹಿಸಿ ಮತ್ತೆ ಇಂದು ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.

ಅರಕಲಗೂಡು ತಾಲ್ಲೂಕಿನ ನಿಲುವಾಗಿಲು ಬಳಿ ಹಾಸನ- ಪಿರಿಯಾಪಟ್ಟಣ ರಸ್ತೆ ಮಾರ್ಗದಲ್ಲಿ ಇಂದಿನಿಂದ ಟೋಲ್ ಸಂಗ್ರಹಕ್ಕೆ ಗುತ್ತಿಗೆದಾರರು ಮುಂದಾಗಿದ್ರು. ರೈತ ಸಂಘ, ಕರವೇ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸ್ಥಳೀಯರು ಪ್ರಭಟನೆಯಲ್ಲಿ ಭಾಗವಹಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಟೋಲ್ ಸಂಗ್ರಹ ಮಾಡುತ್ತಿದ್ದದ್ದನ್ನು ತಡೆದು, ರಸ್ತೆ ತಡೆ ಮಾಡಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ರು.

ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರೋಧಿಸಿ ಕಳೆದ ತಿಂಗಳು ಟೋಲ್ ವಸೂಲಿ ಮಾಡದಂತೆ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳ ಸಮ್ಮುದಲ್ಲಿ ಸಭೆ ನಡೆಸಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಸರಿಪಡಿಸುವ ತನಕ ಟೋಲ್ ವಸೂಲಿ ಕೈಬಿಡಲು ಸೂಚಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳ ಸೂಚನೆ ಧಿಕ್ಕರಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸುತ್ತಿಲ್ಲ. ಈ ರಸ್ತೆ ಹಾದುಹೋಗಿರುವ ಮಾರ್ಗ ಹಾಸನ, ಸಕಲೇಶಪುರ, ಪಿರಿಯಾಪಟ್ಟಣ, ಅರಕಲಗೂಡು ವ್ಯಾಪ್ತಿಯ ನಾಲ್ವರು ಶಾಸಕರಿಗೆ ಒಳಪಡುತ್ತದೆ. ಜನರಿಂದ ಆಯ್ಕೆಯಾದ ಶಾಸಕರು ಜನರು ನಡೆಸುತ್ತಿರುವ ಪ್ರತಿಭಟನೆ, ಮನವಿಗೆ ಬೆಲೆ ಕೊಡದೇ ಆಮಿಷಕ್ಕೆ ಒಳಗಾಗಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಾನಾಕಾರರು ಆರೋಪಿಸಿದ್ರು. ರಸ್ತೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸುವವರೆಗೆ ಟೋಲ್ ಶುಲ್ಕ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದರು.

ಹಿಂದೆ ಈಟಿವಿ ಅವೈಜ್ಞಾನಿಕ ಮತ್ತು ಮೂಲ ಸೌಕರ್ಯವಿಲ್ಲದೇ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ವರದಿ ಮಾಡಿದ್ದ ಹಿನ್ನಲೆಯಲ್ಲಿ ಡಿ.27ರಂದು ಸ್ಥಳೀಯರು, ಮತ್ತು ಸಂಘ ಸಂಸ್ಥೆಯವರು ಬೃಹತ್ ಪ್ರತಿಭಟನೆ ಮಾಡಿದ್ದರಿಂದ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಬ್ರೆಕ್ ಬಿದ್ದಿತ್ತು.

ಪ್ರತಿಭಟನೆ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ, ಪಪಂ ಮಾಜಿ ಸದಸ್ಯ ರವಿಕುಮಾರ್, ಕರವೇ ಮುಖಂಡ ಸೋಮಶೇಖರ್, ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಕಾಂಗ್ರೆಸ್ ಮುಖಂಡ ಶೇಷೇಗೌಡ ಅವರು ಟೋಲ್ ವಸೂಲಿ ತಡೆಗಟ್ಟಲು ಮೀನಮೇಷ ಎಣಿಸುತ್ತಿರುವ ಶಾಸಕರು, ಅಧಿಕಾರಿಗಳ ವಿರುದ್ಧ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದರು.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.