ETV Bharat / state

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ.. ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ - Protest by Indian Kisan Sangam

ಸರ್ಕಾರಕ್ಕೆ ನಿಜವಾಗಲೂ ಕೈಗಾರಿಕೆಗಳ ಬಗ್ಗೆ ಕಾಳಜಿಯಿದ್ದರೆ, ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಮುಖಾಂತರ ಈಗಾಗಲೇ ರೈತರಿಂದ ವಶಪಡಿಸಿಕೊಂಡಿರುವ 12 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸಿದ ಮತ್ತು 36 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸದೇ ಇರುವ ಜಮೀನಿದೆ..

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಹೆಚ್. ಕಾಳೇಗೌಡ

author img

By

Published : Jul 21, 2020, 8:52 PM IST

ಹಾಸನ : ರೈತ ವಿರೋಧಿ ಸರ್ಕಾರ ಮಾಡಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕ್ರಮದ ವಿರುದ್ಧ ಭಾರತೀಯ ಕಿಸಾನ್ ಸಂಘ, ಜುಲೈ 27ರಿಂದ ಪ್ರತಿನಿತ್ಯ ಎಲ್ಲಾ ತಾಲೂಕು ಕಚೇರಿ ಮುಂದೆ ಸರ್ಕಾರದ ಗೆಜೆಟ್ ಪ್ರತಿಯನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಹೆಚ್ ಕಾಳೇಗೌಡ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ 1961,79 ಎಬಿ ಸೆಕ್ಷನ್ 63 ಎ 80 ಇತ್ಯಾದಿ ಕಲಂಗಳಿಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿ ತಂದು ರಾಜ್ಯದ ಕೃಷಿಕರನ್ನು ಬೀದಿಪಾಲು ಮಾಡುವ, ಉಳ್ಳವರಿಗೆ ಕೃಷಿ ಜಮೀನು ಖರೀದಿಸಿ ರಿಯಲ್ ಎಸ್ಟೇಟ್ ದಂಧೆಗಾಗಿ ಮತ್ತು ತಮ್ಮಿಚ್ಛೆಗೆ ತಕ್ಕಂತೆ ಬಳಸುವ ಅಧಿಕಾರ ನೀಡಿದೆ. ಈ ಕ್ರಮದಿಂದ ಕೈಗಾರಿಕಾಭಿವೃದ್ಧಿಯಾಗುತ್ತದೆ ಎಂಬ ಪೊಳ್ಳು ಸಮರ್ಥನೆಯನ್ನು ಸರ್ಕಾರ ನೀಡುತ್ತಿದೆ. ಕೃಷಿಯೇತರರೂ ಕೃಷಿಯಲ್ಲಿ ತೊಡಗಿ ಕೃಷಿ ಉತ್ಪಾದನೆಯನ್ನು ಜಾಸ್ತಿ ಮಾಡಲು ಈ ತಿದ್ದುಪಡಿಯನ್ನು ಮಾಡಲಾಗಿದೆಯೆಂಬ ವಾದವನ್ನು ಮುಂದೂಡಲಾಗುತ್ತದೆ ಎಂದರು.

ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ

ಸರ್ಕಾರಕ್ಕೆ ನಿಜವಾಗಲೂ ಕೈಗಾರಿಕೆಗಳ ಬಗ್ಗೆ ಕಾಳಜಿಯಿದ್ದರೆ, ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಮುಖಾಂತರ ಈಗಾಗಲೇ ರೈತರಿಂದ ವಶಪಡಿಸಿಕೊಂಡಿರುವ 12 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸಿದ ಮತ್ತು 36 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸದೇ ಇರುವ ಜಮೀನಿದೆ. ಅದನ್ನು ಕೈಗಾರಿಕೆಗಳಿಗೆ ಕೊಡ ಬಹುದಾಗಿತ್ತು. ಹೀಗೆ ಈ ತಿದ್ದುಪಡಿಯಿಂದ ರೈತರಿಗೆ ಹಲವು ಅನಾನುಕೂಲಗಳಿದ್ದು, ಈ ಹಿನ್ನೆಲೆ ಈ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರು, ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಎಲ್ಲಾ ಗ್ರಾಮ ಸಮಿತಿ, ತಾಲೂಕು ಸಮಿತಿ, ಜಿಲ್ಲಾ ಸಮಿತಿಗಳಿಗೆ ಕರೆ ನೀಡಿರುವುದಾಗಿ ಹೇಳಿದರು.

ಮುಂದಾದರು ರೈತರ ಬೆಲೆ ವಿಮೆ ಕೊಡಬೇಕು, ನೀರಾವರಿ ಇಲಾಖೆಯಲ್ಲಿ ನಡೆದಿರುವ, ನಡೆಯುತ್ತಿರುವ ಕಾಮಗಾರಿಗಳಿಗೆ ಪರಿಹಾರ ನೀಡದೇ ಹತ್ತಾರು ವರ್ಷಗಳು ಕಳೆದಿದ್ದು, ಕೂಡಲೇ ನೆರವು ಮಾಡಿಕೊಡಬೇಕು. ಕಂದಾಯ ಇಲಾಖೆಯಲ್ಲಿ ಪಿತ್ರಾರ್ಜಿತ ಜಮೀನನ್ನು ಅಣ್ಣ-ತಮ್ಮಂದಿರು ಪಡೆಯಲು ಬಂದರೇ ಹಣ ಹೆಚ್ಚು ಖರ್ಚು ಮಾಡಬೇಕಾಗಿದ್ದು, ಮೊದಲೇ ಖರ್ಚು ಬಗ್ಗೆ ನೋಟಿಸ್ ಬೋರ್ಡ್​ನಲ್ಲಿ ಪ್ರಕಟ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.