ETV Bharat / state

‘ಕುರು ಪಾಂಡವರ ಸಂಗ್ರಾಮ’ ನಾಟಕ ವೀಕ್ಷಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ.. - JDS President HK Kumaraswamy

ಹಿಂದಿನ ಕಾಲದ ಕಥೆಗಳು ಇಂದಿಗೂ ನಮ್ಮ ಕಣ್ಮುಂದೆ ಹಾದು ಹೋಗುತ್ತಿರುವುದಕ್ಕೆ ಪೌರಾಣಿಕ ನಾಟಕಗಳು ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

‘ಕುರು ಪಾಂಡವರ ಸಂಗ್ರಾಮ’ ನಾಟಕ
author img

By

Published : Sep 9, 2019, 10:39 AM IST

ಹಾಸನ: ಹಿಂದಿನ ಕಾಲದ ಕಥೆಗಳು ಇಂದಿಗೂ ನಮ್ಮ ಕಣ್ಮುಂದೆ ಹಾದು ಹೋಗುತ್ತಿರುವುದಕ್ಕೆ ಪೌರಾಣಿಕ ನಾಟಕಗಳು ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಆಲೂರು ಪಟ್ಟಣದ ಶ್ರೀಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ‘ಕುರು ಪಾಂಡವರ ಸಂಗ್ರಾಮ’ ಅಥವಾ ‘ಸರ್ಪಲಾಂಛನ ಪತನ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹೆಚ್ ಕೆ ಕುಮಾರಸ್ವಾಮಿ, ಪೌರಾಣಿಕ ನಾಟಕಗಳು ನಾವು ಕಂಡರಿಯದ ಕಲಾ ಹಂದರಗಳನ್ನು ನೀಡುತ್ತಾ ಸಮಾಜವನ್ನು ತಿದ್ದುವಂತಹ ಕೆಲಸ ಮಾಡುತ್ತಿವೆ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಪ್ರೋತ್ಸಾಹಿಸಬೇಕು. ಆರ್ಥಿಕ ಸಹಾಯ ಮತ್ತು ಮಾಸಾಶನ ಹೆಚ್ಚಳ ಮಾಡಿ ಅವರ ಕಲೆಯನ್ನ ಸಮಾಜ ಆರಾಧಿಸುವಂತೆ ಮಾಡಬೇಕು ಎಂದು ಹೇಳಿದರು.

‘ಕುರು ಪಾಂಡವರ ಸಂಗ್ರಾಮ’ ನಾಟಕ..

ಕಲೆ ಮನುಷ್ಯನ ಆರೋಗ್ಯದ ಮದ್ದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕಲೆ ಎನ್ನುವುದು ಎಲ್ಲರಿಗೂ ಬರುವಂಥದ್ದಲ್ಲ. ಕೆಲವೇ ಕೆಲವರಲ್ಲಿ ತುಂಬಿಕೊಂಡಿದೆ. ಆದ್ದರಿಂದ ಕಲಾವಿದರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಸರ್ಕಾರಗಳು ಹಾಗೂ ಜನಸಾಮಾನ್ಯರು ಶಕ್ತಿ ತುಂಬಬೇಕಿದೆ. ಪೌರಾಣಿಕ ನಾಟಕಗಳಲ್ಲಿನ ಪಾತ್ರಗಳು ವಿಭಿನ್ನವಾಗಿದ್ದು, ಅವರ ತತ್ತ್ವ ಆದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದರು.

Intro:ಹಾಸನ: ಹಿಂದಿನ ಕಥೆಗಳು ಇಂದಿಗೂ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಿರುವುದಕ್ಕೆ ಪೌರಾಣಿಕ ನಾಟಕಗಳು ಕಾರಣ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಕೆ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಆಲೂರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುರು ಪಾಂಡವರ ಸಂಗ್ರಾಮ ಅಥವಾ ಸರ್ಪಲಾಂಛನ ಪತನ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮವನ್ನ ವೀಕ್ಷಣೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು.

ಪೌರಾಣಿಕ ನಾಟಕಗಳು ನಾವು ಕಂಡರಿಯದ ಕಲಾ ಹಂದರಗಳನ್ನು ನೀಡುತ್ತಾ ಸಮಾಜವನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿವೆ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಪ್ರೋತ್ಸಾಹಿಸಬೇಕು. ಆರ್ಥಿಕ ಸಹಾಯ ಮತ್ತು ಮಾಸಾಶನದ ಧನವನ್ನ ಹೆಚ್ಚಳ ಮಾಡಿ ಅವರ ಕಲೆಯನ್ನ ಸಮಾಜ ಆರಾಧಿಸುವಂತೆ ಮಾಡಬೇಕು ಎಂದ್ರು.

ಬೈಟ್: ಹೆಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.

ಕಲೆ ಮನುಷ್ಯನ ಆರೋಗ್ಯದ ಮುದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕಲೆ ಎನ್ನುವುದು ಎಲ್ಲರಿಗೂ ಬರುವಂಥದ್ದಲ್ಲ. ಕೆಲವೇ ಕೆಲವರಲ್ಲಿ ತುಂಬಿಕೊಂಡಿದೆ. ಆದ್ದರಿಂದ ಕಲಾವಿದರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಸರ್ಕಾರಗಳು ಹಾಗೂ ಜನಸಾಮಾನ್ಯರು ಶಕ್ತಿ ತುಂಬಬೇಕಿದೆ. ಪೌರಾಣಿಕ ನಾಟಕಗಳಲ್ಲಿನ ಪಾತ್ರಗಳು ವಿಭಿನ್ನವಾಗಿದ್ದು ಅವರ ತತ್ತ್ವ ಆದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಅಂತ ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ರು.

ಬೈಟ್: ಕೆ.ಎಸ್. ಮಂಜೇಗೌಡ, ಎಪಿಎಂಸಿ ಅಧ್ಯಕ್ಷ.

ಜಿಲ್ಲಾ ಎಚ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ ಪೌರಾಣಿಕ ನಾಟಕಗಳು ಹಿಂದಿನ ಕತೆಗಳನ್ನ ಕಣ್ಣಿನ ಮುಂದೆ ತರುವುದಲ್ಲದೇ ಕಲೆಯ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ ಪ್ರತಿಯೊಬ್ಬರು ಕಲೆಯನ್ನು& ಮೈಗೂಡಿಸಿಕೊಂಡು ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಕಲಾವಿದರನ್ನು ಗುರುತಿಸಿ ನಾವುಗಳು ಆರ್ಥಿಕವಾಗಿ ಪ್ರೋತ್ಸಾಹಿಸಬೇಕು ಎಂದ್ರು.

ಒಟ್ಟಾರೆ ಇತ್ತೀಚಿನ ದಿನದಲ್ಲಿ ಥಿಯೇಟರ್ ಗಳಿಗೆ ಹೋಗಲು ಹಿಂದೆ ಮುಂದೆ ಹೋಗುವ ಮಂದಿ, ಮಲ್ಟಿಪ್ಲೇಕ್ಸ್, ಆನ್ ಲೈನ್ ಸಿನಿಮಾಗಳ ಅಬ್ಬರದ ನಡುವೆಯೂ ಪೌರಾಣಿಕ ನಾಟಕಗಳು ಗತಕಾಲದಲ್ಲಿ ಗತಿಸಿ ಹೋದ ಘಟನಾವಳಿಗಳನ್ನ ಇಂದಿನ ಯುವಪೀಳಿಗೆಗಳಿಗೆ ಪರಿಚಯ ಮಾಡಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

Body:0

Conclusion:- ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.