ETV Bharat / state

ಡ್ಯೂಟಿಗೆ ಅಂತ ಕರೆಸಿ ಜೈಲಲ್ಲಿ ಕೂರಿಸಿದ ಅಧಿಕಾರಿಗಳು: ಕೆಎಸ್​ಆರ್​​ಟಿಸಿ ಬಸ್​ ಚಾಲಕನ ಆರೋಪ

author img

By

Published : Apr 9, 2021, 7:39 PM IST

ಹಾಸನ ಜಿಲ್ಲೆಯ ಕೆಎಸ್​ಆರ್​​ಟಿಸಿ ಬಸ್​ ಚಾಲಕರೊಬ್ಬರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿ, ತಮ್ಮ ಅಳಲು ತೋಡಿಕೊಂಡಿದ್ದಾರೆ.

KSRTC bus driver accuses higher officials in Hassan
ಕೆಎಸ್​ಆರ್​​ಟಿಸಿ ಬಸ್​ ಚಾಲಕ ಆರೋಪ

ಹಾಸನ: ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದ್ದು, ಬಸ್​ ಚಾಲಕನನ್ನ ಕರ್ತವ್ಯಕ್ಕೆ ಹಾಜರಾಗಿ ಎಂದು ಮನವೊಲಿಸಿ ನಂತರ ಬಲವಂತವಾಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿದ ಆರೋಪ ಹಾಸನ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ಕೆಎಸ್​ಆರ್​​ಟಿಸಿ ಬಸ್​ ಚಾಲಕ ಆರೋಪ

ಮದುವೆ ಮನೆಯಲ್ಲಿದ್ದ ನನ್ನನ್ನು ಕರ್ತವ್ಯಕ್ಕೆ ಅಂತ ಕರೆಸಿದ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆಯಲ್ಲಿ ಇರುವಂತೆ ಮಾಡಿದ್ದು, ಕೆಎಸ್​ಆರ್​​ಟಿಸಿ ನೌಕರರು ಈಗ ಹಿರಿಯ ಅಧಿಕಾರಿಗಳಿಗೆ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ರಮೇಶ್​ ಎಂಬ ಚಾಲಕ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಮುಷ್ಕರ ಸಂಬಂಧ ಇನ್ನು ಮಾತನಾಡುವ ಪ್ರಶ್ನೇಯೇ ಇಲ್ಲ.. ಸಂಧಾನದ ಬಾಗಿಲು ಮುಚ್ಚಿದ ಸಿಎಂ!

ಈಗಾಗಲೇ 181 ದಿನ ರಜೆ ಹಾಕಿದ್ದೀಯ. ಕರ್ತವ್ಯ ನಿರ್ವಹಿಸದೇ ಇದ್ದರೆ ನಿನಗೆ ನೋಟಿಸ್ ಜಾರಿ ಮಾಡುತ್ತೇವೆ, ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ತಂದೆಗೆ ಹುಷಾರಿಲ್ಲ ಎಂದರೂ ಕೇಳಲಿಲ್ಲ. ಬಲವಂತವಾಗಿ ಕರೆಯಿಸಿಕೊಂಡಿದ್ದಾರೆ. ಅಲ್ಲದೇ, ಕ್ವಾಟ್ರಸ್ ಪಡೆದಿರುವ ಸಾರಿಗೆ ನೌಕರರು ಪ್ರತಿಭಟನೆ ಮಾಡಬಾರದು. ಹಾಗೇನಾದರೂ ಪ್ರತಿಭಟನೆಯ ಮುಂದುವರಿಸಿದರೆ ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.