ಹಾಸನ : ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗ ಕೆಎಸ್‌ಆರ್‌ಪಿ ಚೀಫ್ ಕಾನ್ಸ್ಟೇಬಲ್ವೊಬ್ಬರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.
ರಾಜೇಂದ್ರ (56) ಮೃತರು. ಹಾಸನ 11ನೇ ಕೆಎಸ್‌ಆರ್‌ಪಿ ಘಟಕದಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ನಗರದ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗದಲ್ಲಿ ಹಾದು ಹೋಗಿರುವ ಟೆಲಿಪೋನ್ ಕೇಬಲ್ನಿಂದ ಕುತ್ತಿಗೆಗೆ ಬಿಗಿದುಕೊಂಡು, ಸಾವಿಗೆ ಶರಣಾಗಿದ್ದಾರೆ.
ಕೇಬಲ್ ತಂತಿಯಿಂದ ಕುತ್ತಿಗೆ ಬಿಗಿದುಕೊಳ್ಳಲು ಹೋಗಿದ್ದು, ಕೇಬಲ್ ತುಂಡಾಗಿ ಕೆಳಗೆ ಸಿಮೆಂಟ್ ಕಟ್ಟೆಯ ಮೇಲೆ ಬಿದ್ದಿದ್ದಾರೆ. ಹೀಗಾಗಿ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತದನಂತರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 2 ವರ್ಷಗಳಿಂದ ಹಾಸನ ಕೆಎಸ್‌ಆರ್‌ಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಈ ಹಿಂದೆ ರಾಜ್ಯ ಗುಪ್ತಚರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲಾಡ್ಜ್‌ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು (ನವೆಂಬರ್ 16-2021) ಆತ್ಮಹತ್ಯೆ ಮಾಡಿಕೊಂಡಿದ್ದರು. ರಂಗನಾಥ್ ಕುಮಾರ್ ಆರ್ ಆತ್ಮಹತ್ಯೆಗೆ ಶರಣಾದವರು ಎಂದು ತಿಳಿದುಬಂದಿತ್ತು.
ಬೆಂಗಳೂರಿನ ಉಪ್ಪಾರಪೇಟೆ ಸನ್ಮಾನ್ ಲಾಡ್ಜ್‌ನಲ್ಲಿ ರಾತ್ರಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದು ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದರು.
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಕಾನ್ಸ್ಟೇಬಲ್, ಒಒಡಿ ಮೇರೆಗೆ ಬೆಂಗಳೂರಿನ ಐಜಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಲಾಡ್ಜ್‌ನಲ್ಲಿ ಯಾರೂ ಇಲ್ಲದಿರುವಾಗ ನೇಣಿಗೆ ಕೊರಳೊಡ್ಡಿದ್ದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಡೆತ್ನೋಟ್ ಬರೆದಿಟ್ಟು, ಗುಂಡು ಹಾರಿಸಿಕೊಂಡು ಕಾನ್ಸ್ಟೇಬಲ್ ಆತ್ಮಹತ್ಯೆ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹೆಡ್ ಕಾನ್ಸ್ಟೇಬಲ್ ಡೆತ್ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ (ಜೂನ್ 16-2020) ನಡೆದಿತ್ತು. ಗದಗದಲ್ಲಿ ಡಿಎಆರ್ ಹೆಡ್ ಕಾನ್ಸ್ಟೇಬಲ್ ಆಗಿದ್ದ ಕೆ.ಎಸ್.ಕೊಪ್ಪದ ಕರ್ತವ್ಯದಲ್ಲಿರುವಾಗಲೇ ಭದ್ರತೆಗೆ ನೀಡಲಾಗಿದ್ದ 303 ರೈಫಲ್ನಿಂದ ಕುತ್ತಿಗೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಾನ್ಸ್ಟೇಬಲ್ ಗದಗ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯ ಭದ್ರತಾ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಂದು ಮಧ್ಯಾಹ್ನದಿಂದ ಸಂಜೆ 9 ಗಂಟೆಗೆ ಡ್ಯೂಟಿ ಇತ್ತು. ಆದರೆ, ಇನ್ನೊಬ್ಬ ಪೇದೆ ಬಂದು ಇವರನ್ನು ರಿಲೀವ್ ಮಾಡುವ ಹೊತ್ತಿಗೆ ಅಂದರೆ ಸುಮಾರು 8.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಕಾಣಿಸಿಕೊಂಡಿದ್ದರು. ಬಳಿಕ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಕೊರೊನಾಗೆ ಹೆದರಿ ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ಟೇಬಲ್