ಹಾಸನ: ಭಯಾನಕ ರೋಗವಾಗಿ ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಮುಖ್ಯ ನ್ಯಾಯಾಲಯದ ಆದೇಶದಂತೆ ಕೋರ್ಟಿಗೆ ಬರುವ ಕಕ್ಷಿದಾರರ ಆರೋಗ್ಯ ತಪಾಸಣೆ ಬುಧವಾರದಿಂದ ಪ್ರಾರಂಭವಾಗಿದೆ.
ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ನ್ಯಾಯಾಧೀಶ ಸಿ.ಕೆ. ಬಸವರಾಜು ಮಾತನಾಡಿ, ಮುಖ್ಯ ನ್ಯಾಯಾಲಯದ ಆದೇಶದಂತೆ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕ ಕ್ರಮವಾಗಿ ಕೋರ್ಟಿಗೆ ಬರುವ ಕಕ್ಷಿದಾರರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೂ ಒಂದು ಪ್ರಕರಣ ಕೂಡ ಕಂಡು ಬಂದಿಲ್ಲ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡಿದೆ ಎಂದರು.
ಈಗಾಗಲೇ ಮುನ್ನೆಚ್ಚರಿಕ ಕ್ರಮವಾಗಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಲ್ಲಿ ಹಾಗೂ ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಾತ್ರೆ, ಸಿನಿಮಾ ಮಂದಿರ, ಮದುವೆ, ಧಾರ್ಮಿಕ ಕಾರ್ಯಗಳು, ಸೂಪರ್ ಮಾರ್ಕೇಟ್ ಸ್ಥಳ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿ ನಿಗಾವಹಿಸಿ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿ ಕಡಿಮೆ ಜನರು ಸಭೆ ಸಮಾರಂಭದಲ್ಲಿ ಭಾಗವಹಿಸಲು ಪ್ರಚಾರ ಮಾಡಲಾಗಿದೆ ಎಂದರು.