ETV Bharat / state

ಹಾಸನ ಜಿ.ಪಂನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ: ಸಿದ್ದಗಂಗಾ ಶ್ರೀಗಳ ಪುಣ್ಯ ಸ್ಮರಣೆ - Hassan KDP meeting

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

KDP meeting in Hassan
ಹಾಸನದಲ್ಲಿ ತ್ರೈಮಾಸಿ ಕೆಡಿಪಿ ಸಭೆ
author img

By

Published : Jan 25, 2020, 11:24 AM IST

Updated : Jan 25, 2020, 11:57 AM IST

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪುಣ್ಯ ಸ್ಮರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಾಸನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಈ ಸಂಧರ್ಭದಲ್ಲಿ ಮಾತನಾಡಿದ ಕಾನೂನು ಸಂಸದೀಯ, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿವಕುಮಾರ ಸ್ವಾಮೀಜಿ ಅವರು ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಶಿಕ್ಷಣದಿಂದ ವಂಚಿತರಾಗಿದ್ದ ಸಾವಿರಾರು ಬಡಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಿದ್ದಾರೆ ಎಂದರು.

ಜಿಲ್ಲೆಯ ಪ್ರತೀ ತಾಲೂಕಿನಲ್ಲಿಯೂ ಪಿಂಚಣಿ ಅದಾಲತ್ ನಡೆಸಿ ಉಪ ವಿಭಾಗಾಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿದ್ದು, ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು. ಪಿಂಚಣಿಗಾಗಿ ಬಂದ ಹೊಸ ಅರ್ಜಿಗಳು 45 ದಿನಗಳೊಳಗೆ ವಿಲೇವಾರಿಯಾಗಬೇಕು. ಅಲ್ಲದೆ ತಹಶೀಲ್ದಾರರು ಇದರ ಜವಾಬ್ದಾರರು. ನಂತರದಲ್ಲಿ ಆರ್​ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ತಲುಪಲಿದೆ ಎಂದರು.

ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದ ಹೆಚ್.ಡಿ.ರೇವಣ್ಣ ಹಾಗೂ ಕೆ.ಎಂ.ಶಿವಲಿಂಗೇಗೌಡರಿಗೆ ಆ ಕುರಿತ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕಡ್ಡಾಯವಾಗಿ ನೀರು ಕೊಡಿಸುವ ಜವಾಬ್ದಾರಿ ತಮ್ಮದೆಂದು ಸಚಿವರು ಭರವಸೆ ನೀಡಿದರು.

ಅರಣ್ಯ ಪ್ರದೇಶದಲ್ಲಿ ಮತ್ತು ಅನಧಿಕೃತವಾಗಿ ನಡೆಯುತ್ತಿರುವ ಕ್ರಶರ್​ಗಳ ಕುರಿತು ಒಂದು ವಾರದೊಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಮಾಧುಸ್ವಾಮಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.

Intro:ಹಾಸನ : ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಪಿಂಚಣಿ ಅದಾಲತ್ ನಡೆಸಿ ಉಪವಿಭಾಗಾಧಿಕಾರಿಗಳು ಕಡ್ಡಾಯವಾಗಿ ಸ್ಥಳದಲ್ಲಿದ್ದು, ಅರ್ಜಿ ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಸಿ ಮಾತನಾಡಿ, ಪಿಂಚಣಿಗಾಗಿ ಬಂದ ಹೊಸ ಅರ್ಜಿಗಳು 45 ದಿನಗಳೊಳಗೆ ವಿಲೇವಾರಿಯಾಗಬೇಕು, ಅಲ್ಲದೆ ತಹಶೀಲ್ದಾರರು ಇದರ ಜವಾಬ್ದಾರರು ನಂತರದಲ್ಲಿ ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ತಲುಪಲಿದೆ ಎಂದರು.
ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಇನ್ನು ಒದಗಿಸಿಲ್ಲ ಎಂದು ಅಸಮಧಾನ ವ್ಯಕ್ತಡಿಸಿದ ಹೆಚ್.ಡಿ. ರೇವಣ್ಣ ಹಾಗೂ ಕೆ.ಎಂ. ಶಿವಲಿಂಗೇಗೌಡರಿಗೆ ಆ ಕುರಿತ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕಡ್ಡಾಯವಾಗಿ ನೀರು ಕೊಡಿಸುವ ಜವಾಬ್ದಾರಿ ತಮ್ಮದೆಂದು ಸಚಿವರು ಭರವಸೆ ನೀಡಿದರು.
ಪ್ರತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ನೆರವಾಗುವಂತೆ ನರೇಗಾದಡಿ ಸಾಮಾಜಿಕ ಅರಣ್ಯದಲ್ಲಿ ರೇಷ್ಮೆ ಸಸಿ ಬೆಳೆಸಿ ವಿತರಣೆಗಾಗಿ ರೇಷ್ಮೆ ಇಲಾಖೆಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜಿಲ್ಲೆಯಲ್ಲಿ ಕುಟುಂಬಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿರುವ ಅನಧಿಕೃತ ಪಡಿತರ ಕಾರ್ಡ್‍ಗಳನ್ನು ಪಟ್ಟಿಯಿಂದ ತೆಗೆಯುವಂತೆ ಸಚಿವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.
ಶಾಸಕರಾದ ಹೆಚ್.ಡಿ. ರೇವಣ್ಣ, ಸಿ.ಎನ್ ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ ರಾಗಿ, ಭತ್ತ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ಗುರಿಗೆ ತಕ್ಕಂತೆ ಬೆಳೆ ಬಂದಿಲ್ಲ ಮತ್ತು ಮಾರುಕಟ್ಟೆಗೆ ಬರುವ ರೈತ ತಂತ್ರಾಂಶಗಳನ್ನು ಬಳಸಿ ನೋಂದಣಿ ಮಾಡಿಸುವ ಪ್ರಕ್ರಿಯೆ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುವ ಸಾಧ್ಯತೆಗಳಿವೆ ಹಾಗಾಗಿ ಪ್ರಕ್ರಿಯೆ ಸರಳಿಕರಿಸುವಂತೆ ಮತ್ತು ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ದೂರವಿಟ್ಟು ರೈತರಿಗೆ ಅನುಕೂಲ ಮಾಡುವಂತೆ ಒತ್ತಾಯಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡಿ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರಲ್ಲದೆ, ಮಧ್ಯಮ ಹಂತದ ಸಾಲವನ್ನು ಸಹಕಾರ ಬ್ಯಾಂಕ್‍ಗಳು ರೈತರಿಗೆ ವಿತರಿಸದೇ ಇರುವುದು ಸರಿಯಾದ ಕ್ರಮವಲ್ಲ ಅದು ಮುಂದುವರಿಯದಿರಲಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಜಿಲ್ಲೆಯಲ್ಲಿ ಅನಧಿಕೃತ ಕ್ರಶರ್‍ಗಳು ಚಾಲ್ತಿಯಲ್ಲಿದ್ದು, ವಿದ್ಯುತ್ ಸೌಲಭ್ಯ ಕಡಿತಗೊಳಿಸಿದ್ದರೂ ಡೀಸಲ್ ಮೊಟಾರ್‍ಗಳನ್ನು ಬಳಸಿ ಕೆಲಸ ಮುಂದುವರೆಸುತ್ತಿದ್ದಾರೆ. ಅರಣ್ಯ ಪ್ರದೇಶಗಳಲ್ಲಿಯೂ ಅಕ್ರಮವಾಗಿ ಕ್ರಶರ್ ನಡೆಯುತ್ತಿವೆ ಅಲ್ಲದೆ ಜಿ.ಪಿ.ಎಸ್ ಇಲ್ಲದ ವಾಹನಗಳಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದ್ದು ಇವುಗಳನ್ನು ನಿಲ್ಲಿಸುವಂತೆ ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಕೆ.ಎಸ್. ಲಿಂಗೇಶ್, ಹೆಚ್.ಡಿ. ರೇವಣ್ಣ, ಎ.ಟಿ. ರಾಮಸ್ವಾಮಿ ಸಚಿವರಿಗೆ ಹೇಳಿದರು.
ಸಚಿವರಾದ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿ ಅರಣ್ಯ ಪ್ರದೇಶದಲ್ಲಿ ಮತ್ತು ಅನಧಿಕೃತವಾಗಿ ನಡೆಯುತ್ತಿರುವ ಕ್ರಶರ್‍ಗಳ ಕುರಿತು ಒಂದು ವಾರದೊಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ ಮರಳು, ಜಲ್ಲಿ ಸಾಗಾಣಿಕೆ ಮಾಡುವ ವಾಹನಗಳು ಕಡ್ಡಾಯವಾಗಿ ಪರ್ಮಿಟ್ ಪಡೆದುಕೊಳ್ಳುವುದರ ಜೊತೆಗೆ ಜಿ.ಪಿ.ಎಸ್ ಅಳವಡಿಕೊಳ್ಳತಕ್ಕದ್ದು. ನಿಯಮಬಾಹಿರವಾಗಿ ಸಾಗಾಣಿಕೆ ನಡೆಸುವ ವಾಹನಗಳನ್ನು ತಡೆಹಿಡಿದು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಹೆಚ್.ಡಿ. ರೇವಣ್ಣ, ಕೆ.ಎಂ. ಶಿವಲಿಂಗೇಗೌಡ ಮತ್ತು ಸಿ.ಎನ್. ಬಾಲಕೃಷ್ಣ ಅವರು ಮಾತನಾಡಿ ಜಿಲ್ಲೆಯ ಬಹುತೇಕ ತಾಲ್ಲೂಕುಗಳಿಂದ ಹಾಸನ ನಗರದ ಕಾರ್ಖಾನೆಗಳಿಗೆ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದು, ಅವರನ್ನು ಪ್ರಾಣಿಗಳಂತೆ ವಾಹನಗಳಲ್ಲಿ ತುಂಬಿಕೊಂಡು ಕಾರ್ಯಕ್ಷೇತ್ರಕ್ಕೆ ಕರೆ ತರುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಇದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಒತ್ತಾಯಿಸಿದರಲ್ಲದೆ, ಆ ಮಹಿಳೆಯರಿಗೆ ವಿಶೇಷ ಬಸ್‍ಪಾಸ್ ಸೌಲಭ್ಯ ಹೊದಗಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಕಾರ್ಮಿಕ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಸ್‍ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಅದೇ ರೀತಿ ಹಾಸನ ಜಿಲ್ಲೆಯಲ್ಲಿಯೂ ಬಸ್‍ಪಾಸ್ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರತಿ ಕಾರ್ಖಾನೆಗೆ ತೆರಳಿ ಯಾವ ಸ್ಥಳಗಳಿಂದ ಎಷ್ಟು ಮಂದಿ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
Last Updated : Jan 25, 2020, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.