ETV Bharat / state

ಕಾವೇರಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ - ಕಾವೇರಿ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ

ರಾಜ್ಯದಲ್ಲಿ ವರುಣನ ಆರ್ಭಟದಿಂದ ಕಾವೇರಿ ನದಿ ನೀರಿನಲ್ಲಿ ಹರಿವು ಹೆಚ್ಚಾಗಿದೆ. ಅರಕಲಗೂಡು ತಾಲೂಕಿನ ರಾಮನಾಥಪುರ ಸೇರಿದಂತೆ ಹಳೇ ಹಂಪಾಪುರ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.

Flood anxiety in people
ನದಿ ತೀರದ ಜನರಲ್ಲಿ ಪ್ರವಾಹದ ಭೀತಿ
author img

By

Published : Aug 6, 2020, 7:18 PM IST

ಅರಕಲಗೂಡು: ರಾಮನಾಥಪುರದ ರಾಮೇಶ್ವರ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ರಸ್ತೆಗೆ ಹೊಂದಿಕೊಂಡಿರುವ ಕೊಲ್ಲಿಯಲ್ಲಿ ರಸ್ತೆಯ ಮಟ್ಟಕ್ಕೆ ಕಾವೇರಿ ನದಿ ನೀರು ಹರಿದು ಬಂದಿದ್ದು, ಮನೆಗಳು ಜಲಾವೃತವಾಗುವ ಸಂಭವ ಎದುರಾಗಿದೆ.

ಕಾವೇರಿ ನದಿ ತೀರದ ಜನರಲ್ಲಿ ಪ್ರವಾಹದ ಭೀತಿ

ಅರಕಲಗೂಡು ತಾಲೂಕಿನ ಹಳೇ ಹಂಪಾಪುರ ರಸ್ತೆಯ ಕೆಲವು ಮನೆಯ ಸುತ್ತ ನೀರು ನಿಂತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಹತ್ತಾರು ಮನೆಗಳು ಜಲಾವೃತವಾಗಲಿವೆ. ಕಳೆದೆರಡು ವರ್ಷಗಳಂತೆ ಈ ಬಾರಿಯೂ ಪ್ರವಾಹ ಬರುವ ಸೂಚನೆ ಕಾಣತೊಡಗಿದೆ ಅನ್ನೋದು ಸ್ಥಳೀಯರ ಆತಂಕ.

ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ಹಾಗೂ ಕಂದಾಯ ಸಿಬ್ಬಂದಿ ಭೇಟಿ ನೀಡಿ, ಸ್ಥಳೀಯರ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.