ಹಾಸನ : ರಮೇಶ್ ಜಾರಕಿಹೊಳಿ ತನಿಖೆ ಮುಗಿಯುವವರೆಗೂ ರಾಜೀನಾಮೆ ನೀಡಬೇಕಾಗುತ್ತದೆ. ತನಿಖೆಯಲ್ಲಿ ಆರೋಪ ಸಾಬೀತಾಗದಿದ್ದರೇ ಮಂತ್ರಿಯಾಗಿಯೇ ಮುಂದುವರೆಯಲಿ. ಈಗ ಅವರ ಮೇಲಿನ ಆರೋಪದಿಂದ ರಾಜೀನಾಮೆ ಕೊಟ್ಟಿರುವುದು ಸೂಕ್ತವಾಗಿದೆ ಎಂದು ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ತನಿಖೆಯಲ್ಲಿ ಮಂತ್ರಿಯ ಮೇಲಿನ ಆರೋಪ ಸಾಬೀತಾಗದಿದ್ದರೇ ಮಂತ್ರಿಯಾಗಿಯೇ ಉಳಿಯಲಿ. ಆದರೆ ಇದು ರಾಜಕೀಯ ವಲಯಕ್ಕೆ ಮುಜುಗರ ತರುವಂತಹುದ್ದು. ರಾಜಕಾರಣಿಗಳಿಗೆ ಇಂತಹ ವಿಚಾರ ಎಚ್ಚರಿಕೆಯ ಗಂಟೆ ಇದ್ದಂತೆ. ಜನರು ನಮ್ಮನ್ನು ಆಶೀರ್ವದಿಸಿ ಕಳುಹಿಸಿರುತ್ತಾರೆ. ಇಂತಹ ವಿಚಾರ ಸಾರ್ವಜನಿಕ ವಲಯದಲ್ಲಿ ಬೇಸರ ತರುತ್ತದೆ. ಮುಖ್ಯಮಂತ್ರಿಗಳು ಸದನದಲ್ಲಿ ಈ ವಿಚಾರವಾಗಿ ಉತ್ತರ ನೀಡಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ, ಆಮರಣಾಂತ ಉಪವಾಸ: ಬಸವ ಜಯಮೃತ್ಯುಂಜಯ ಶ್ರೀಗಳ ಎಚ್ಚರಿಕೆ
ಇನ್ನು ಈ ಘಟನೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮನೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರವಾಗಿ ಹೋರಾಟ ನಡೆದರೆ ನಾವು ಬೆಂಬಲಿಸುತ್ತೇವೆ. ಸದನದೊಳಕ್ಕೆ ಮೊಬೈಲ್ ತರುವುದೂ ಕೂಡ ತಪ್ಪು. ಕುಂಟು ನೆಪ ಹೇಳಿ ಸದನಕ್ಕೆ ಮೊಬೈಲ್ ತರುವುದನ್ನು ನಿಲ್ಲಿಸಬೇಕು ಬಾಲಕೃಷ್ಣ ಆಗ್ರಹಿಸಿದರು.