ಹಾಸನ: ಇಂದು ನಗರದ ಎರಡು ಕಡೆ ಎಸಿಬಿ ದಾಳಿ ನಡೆಸಿದ್ದು, ಪ್ರಮುಖ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿಗಳಿಕೆ ಹೊಂದಿದ್ದಾರೆ ಎಂಬ ದೂರಿನನ್ವಯ ಲ್ಯಾಂಡ್ ಆರ್ಮಿ ಉಪ ಅಭಿಯಂತರೆ ಅಶ್ವಿನಿ ಮತ್ತು ಅವರ ತಂದೆ ಶ್ರೀನಿವಾಸ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದಯಗಿರಿ ಬಡಾವಣೆಯಲ್ಲಿರುವ ಅಶ್ವಿನಿ ಮನೆ ಹಾಗೂ ವಿದ್ಯಾನಗರದಲ್ಲಿರುವ ಅಧಿಕಾರಿಯ ತಂದೆಯ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ್ದು, ಹಲವು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.
ಶಿವಮೊಗ್ಗ ಮೂಲದ ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ಹಾಸನದ ಅಧಿಕಾರಿಗಳ ಸಹಾಯ ಪಡೆದು ಬೆಳಗ್ಗೆ ಎರಡು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.