ಹಾಸನ : ಆ್ಯಪಲ್ ಅಂದ್ರೆ ಸಾಕು ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಕಾಶ್ಮೀರಿ ಆ್ಯಪಲ್ ಅಂದ್ರೆ ಸಾಕು ಜನರು ಮುಗಿಬಿದ್ದು ಖರೀದಿಸುತ್ತಾರೆ. ಅಂತಹ ಸೇಬನ್ನು ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮನೆಯ ಪಾಟ್ವೊಂದರಲ್ಲಿ ಬೆಳೆದಿದ್ದಾರೆ.
ನಗರದಲ್ಲಿ ಸರ್ಕಾರಿ ಮಹಿಳಾ ಇಂಜಿನಿಯರ್ ಆಗಿರುವ ಕವಿತಾ ಅವರು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಅವರು ತಮ್ಮ ಮನೆ ಹೂವಿನ ಪಾಟ್ನಲ್ಲಿ ಸೇಬು ಹಣ್ಣಿನ ಗಿಡ ಬೆಳೆದು ಮಾದರಿಯಾಗಿದ್ದಾರೆ.
ಈಗ ಇವರು ಫಲವನ್ನು ಕಂಡಿದ್ದಾರೆ. ಮೊದಲಿಗೆ ಈ ಸೇಬಿನ ಗಿಡ ನೆಟ್ಟು ಒಂದು ವರ್ಷಗಳ ಕಾಲ ಆರೈಕೆ ಮಾಡಿದ್ದಾರೆ. ನಂತರ ಗಿಡದ ಹೂ ಕಾಣಿಸಿದ್ರೂ, ಎಲ್ಲಾ ಹೂಗಳು ಉದುರಿವೆ. ಆಗ ಇದು ಫಲ ನೀಡಲ್ಲ ಎಂಬ ಸಂದೇಹ ಬಂದಿದೆ. ಆದರೆ, ನಂತರ ಭರವಸೆ ಬಿಡದೆ ಮತ್ತೊಮ್ಮೆ ಆರೈಕೆ ಮಾಡಿದಾಗ ಸೇಬು ಕಾಯಿಬಿಟ್ಟು ಈಗ ಹಣ್ಣಾಗಿದೆ.
![innovative-engeneer-grows-kashmiri-apples-in-hassan](https://etvbharatimages.akamaized.net/etvbharat/prod-images/hsn-01-pot-apple-7203289-avb-hd_30072021175000_3007f_1627647600_1036.jpg)
ಈ ಸಂಗತಿ ನಮಗೆ ಬಾರಿ ಖುಷಿ ಕೊಟ್ಟಿದೆ. ಮುಂದೆ ಜಮೀನಿನಲ್ಲೂ ಸೇಬು ಬೆಳೆಯೋ ಪ್ರಯತ್ನ ಮಾಡ್ತೀನಿ ಅಂತಾ ಇಂಜಿನಿಯರ್ ಕವಿತಾ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಓದಿ: ಆಯ್ತು ಅಂತಾ ಅಷ್ಟೇ ಅಲ್ಲರೀ, ನೀವು ಕ್ಷಮೆ ಕೇಳಿ ಅವರ ಬಳಿ.. ಜಿಲ್ಲೆಗೊಬ್ರು ಇಂಥ ಒಳ್ಳೇ ಅಧಿಕಾರಿ ಇರ್ಬೇಕ್‌ರೀ..