ETV Bharat / state

ಪೊಲೀಸ್​​ ಇಲಾಖೆಗೆ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿಡಲಾಗುವುದು: ಹಾಸನ ಎಸ್ಪಿ - ಹಾಸನ ಲೆಟೆಸ್ಟ್ ನ್ಯೂಸ್

ಜಿಲ್ಲೆಯಲ್ಲಿ ಪೊಲೀಸ್​​ ಇಲಾಖೆ ಸಿಬ್ಬಂದಿಗೆ ಕೊರೊನಾ ತಗುಲಿರುವ ಹಿನ್ನೆಲೆ ಮನೆಗಳ್ಳತನ ಹಾಗೂ ಇತರೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹಾಗಾಗಿ ಸಾರ್ವಜನಿಕರು ಪೊಲೀಸರಿಗೆ ಸ್ಪಂದಿಸಬೇಕು. ಅವರಿಗೆ ತಿಳಿದಿರುವ ವಿಚಾರಗಳ ಕುರಿತು ಪೊಲೀಸ್​ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಹೇಳಿದ್ದಾರೆ.

shrinivaasa gowdaru
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡರು
author img

By

Published : Sep 3, 2020, 7:45 AM IST

ಹಾಸನ: ಮದ್ಯ ಸೇವಿಸಿ ಅಥವಾ ಯಾವುದೇ ರೀತಿಯ ಗಲಾಟೆ ನಡೆಯುತ್ತಿರುವುದನ್ನು ಕಂಡಾಗ ಸಾರ್ವಜನಿಕರು ಸುಮ್ಮನಾಗದೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಶ್ರೀನಿವಾಸ ಗೌಡ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಡಾಬಾ ಇತರೆ ಕಡೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿದ್ದಾಗ ಪೊಲೀಸರಿಗೆ ವಿಷಯ ಮುಟ್ಟಿಸದಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೇ ಹೋಟೆಲ್ ಪರವಾನಗಿ ಕೂಡ ರದ್ದು ಮಾಡಲಾಗುವುದು ಎಂದು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ

ಇನ್ನು ಕೆಲವೇ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತದೆ. ಚನ್ನರಾಯಪಟ್ಟಣದಲ್ಲಿ ನಮ್ಮ ಇಲಾಖೆಯ (ಪೊಲೀಸ್​​) ಹೆಚ್ಚಿನ ಸಿಬ್ಬಂದಿಗೆ ಕೊರೊನಾ ತಗುಲಿರುವ ಕಾರಣ ಅಪರಾಧ ತಡೆಗೆ ಸ್ವಲ್ಪ ಹಿನ್ನಡೆಯಾಗಿರಬಹುದು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು ಎಂದಿದ್ದಾರೆ.

ಗಲಾಟೆ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿದರೆ ಪೊಲೀಸ್ ಕಂಟ್ರೋಲ್ ರೂಮ್​​ಗೆ ಕರೆ ಮಾಡಿ ತಿಳಿಸಿದರೂ ಸಾಕು. ನಮ್ಮ ಸಿಬ್ಬಂದಿ ತಕ್ಷಣವೇ ಅಲರ್ಟ್ ಆಗುತ್ತಾರೆ. ಕರೆ ಮಾಡಿದವರ ಹೆಸರು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.