ಅರಕಲಗೂಡು: ತಾಲೂಕು ಆರೋಗ್ಯಾಧಿಕಾರಿಗಳ ತಂಡ ಅಸ್ಸೋಂನಿಂದ ಬಂದಿದ್ದ ಕೆಲಸಗಾರರಿಗೆ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿ ತಪಾಸಣೆ ನಡೆಸಿದೆ.
ಸಂತೆಮರೂರ್ ಹತ್ತಿರ ಅಡಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸುಮಾರು ಎಂಟು ಕುಟುಂಬಗಳಲ್ಲಿ 25 ಜನರಿದ್ದಾರೆ. ಅವರಿಗೆ ಕೊರೊನಾ ಮಹಾಮಾರಿ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ವೈಯಕ್ತಿಕ ಸ್ವಚ್ಛವಾಗಿ ಕೈತೊಳೆಯುವ ಕ್ರಮಗಳ ಬಗ್ಗೆ, ಮಾಸ್ಕ್ ಧರಿಸುವ ಬಗ್ಗೆ ತಿಳಿಸಲಾಯಿತು.
ಜ್ವರ ತಪಾಸಣೆ ಮಾಡಿದಾಗ ಇಂದು ಯಾರಿಗೂ ಜ್ವರ, ಕೆಮ್ಮು ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಜ್ವರ ಅಥವಾ ಕೆಮ್ಮು, ಉಸಿರಾಟದ ತೊಂದರೆ ಕಂಡು ಬಂದಲ್ಲಿ ನಮಗೆ ಮಾಹಿತಿ ನೀಡುವಂತೆ ಅಥವಾ ಆಸ್ಪತ್ರೆಗೆ ಬರುವಂತೆ ಸೂಚಿಸಲಾಗಿದೆ. 25 ಜನರು ವಾಸವಿದ್ದು, ಅದರಲ್ಲಿ ಇಬ್ಬರು ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಿಸಿ ಆಸ್ಪತ್ರೆಗೆ ಬಂಧು ಟಿಟಿ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಲಾಯಿತು.