ಅರಕಲಗೂಡು: ಅವ್ಯವಸ್ಥೆಯ ಆಗರವಾದ ಅರಕಲಗೂಡು ಇಂದಿರಾ ಕ್ಯಾಂಟೀನ್ಗೆ ಇಂದು ಬೆಳಗ್ಗೆ ಜಿಪಂ ಸದಸ್ಯ ಎಸ್.ಪಿ. ರೇವಣ್ಣ ಭೇಟಿ ನೀಡಿ, ಅಡಿಗೆ ಆಹಾರ ಪರಿಶೀಲಿಸಿದರು.
ಬೆಳಗಿನ ತಿಂಡಿ ಬಾತ್ ರೈಸ್ ತಯಾರಿಸಲು ಮಸಾಲೆ ತರಕಾರಿ ಇಲ್ಲ, ಕಳಪೆ ಒಗ್ಗರಣೆ ಬಳಸಲಾಗಿದ್ದು ರುಚಿಕರವಾಗಿರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಬಡವರ ಹೊಟ್ಟೆ ತುಂಬಿಸಲು ಜಾರಿಗೆ ತಂದ ಕ್ಯಾಂಟೀನ್ ಏಜೆನ್ಸಿಯವರ ಜೇಬು ತುಂಬಿಸುತ್ತಿದೆ. ನಿತ್ಯ 100 ಜನರು ಇಲ್ಲಿಗೆ ಬರುವುದು ಅನುಮಾನ. ಆದ್ರೆ 600 ಜನರ ತಿಂಡಿ ಊಟದ ಬಿಲ್ ಮಾಡಿಕೊಳ್ಳುತ್ತಾರೆ.
ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಇಲ್ಲವಾದರೆ ಏಕಾಂಗಿ ಧರಣಿ ಕುಳಿತು ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ರೇವಣ್ಣ ನೀಡಿದ್ರು. ಖಾಸಗಿ ವ್ಯಕ್ತಿಯಿಂದ ಸರಬರಾಜಾಗಿರುವ ಅಕ್ಕಿ ಗುಣಮಟ್ಟವಾಗಿಲ್ಲ. ಅಲ್ಲದೇ ಫಿಲ್ಟರ್ ಬದಲಾಯಿಸಿಲ್ಲ. ಶಾಸಕರು ಇಲ್ಲಿಗೆ ಭೇಟಿ ನೀಡಿ ಅವ್ಯವಸ್ಥೆ ಸರಿಪಡಿಸುವಂತೆ ಜಿ.ಪಂ ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಾಗಿಲ್ಲ ಎಂದು ರೇವಣ್ಣ ಕಿಡಿಕಾರಿದ್ರು.