ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕೂಡ ಹೊಸದಾಗಿ 395 ಪ್ರಕರಣಗಳು ವರದಿಯಾಗಿವೆ.
ಈವರೆಗೂ ಜಿಲ್ಲೆಯಲ್ಲಿ 22, 513 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 18, 575 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3550 ಸಕ್ರಿಯ ಪ್ರಕರಣಗಳಿವೆ. ಇಂದು 3 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 388 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಹೇಳಿದರು.
![Increase in Corona virus infected cases in Hassan District](https://etvbharatimages.akamaized.net/etvbharat/prod-images/kn-hsn-01-today-corona3-avb-7203289_15102020155204_1510f_01948_239.jpg)
ಇಂದು ಜಿಲ್ಲೆಯ ಅರಸೀಕೆರೆಯಲ್ಲಿ 58, ಚನ್ನರಾಯಪಟ್ಟಣದಲ್ಲಿ 78, ಆಲೂರು 06, ಹಾಸನ 113, ಹೊಳೆನರಸೀಪುರ 49, ಅರಕಲಗೂಡು 11, ಬೇಲೂರು 69 ಹಾಗೂ ಸಕಲೇಶಪುರದಲ್ಲಿ 09 ಮಂದಿಗೆ ಸೋಂಕು ದೃಢಪಟ್ಟಿದೆ.