ETV Bharat / state

ಹಾಸನದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ: ರೇವಣ್ಣ ಆಗ್ರಹ - ಅಕ್ರಮ ಮರಳು ಸಾಗಾಣಿಕೆ ನ

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಸೇರಿದಂತೆ ಇತರೆ ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಕೂಡಲೇ ಕಡಿವಾಣ ಹಾಕುವ ಮೂಲಕ ಬಡವರ ಕಾಮಗಾರಿಗಳಿಗೆ ಮರಳು ಸಿಗುವಂತಾಗಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.

Revanna
ಎಚ್.ಡಿ. ರೇವಣ್ಣ
author img

By

Published : Feb 16, 2020, 12:41 PM IST

ಹಾಸನ: ಜಿಲ್ಲೆಯಲ್ಲಿ ಮರಳು ದಂಧೆ ಹೆಚ್ಚಾಗಿದ್ದು, ಕೂಡಲೇ ಕಡಿವಾಣ ಹಾಕುವ ಮೂಲಕ ಬಡವರ ಕಾಮಗಾರಿಗಳಿಗೆ ಮರಳು ಸಿಗುವಂತಾಗಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಸೇರಿದಂತೆ ಇತರೆ ತಾಲೂಕುಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಮರಳು ದಂಧೆ ಹೆಚ್ಚಾಗಿರುವುದರಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಪೊಲೀಸರೇ ಹಣ ಪಡೆದು ಮರಳನ್ನು ಅವರಿಗೆ ಬೇಕಾದವರಿಗೆ ಕೊಡುತ್ತಿದ್ದಾರೆ. ಸಕಲೇಶಪುರದಲ್ಲೇ ಇರುವ ಒಬ್ಬ ಪ್ರೊಬೇಷನರಿ ಡಿವೈಎಸ್ಪಿ ಗೋಪಿ ಎಂಬುವರ ಸಹಕಾರದಲ್ಲಿ ರಾತ್ರಿ ಸಮಯ ಮರಳು ಲೂಟಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ- ಎಚ್.ಡಿ. ರೇವಣ್ಣ

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಟೀ-ಕಾಫಿ ಯಾವುದು ಸಿಗುತ್ತಿಲ್ಲ. ಬದಲಿಗೆ ಎಣ್ಣೆಯು ಸಲೀಸಾಗಿ ಸಿಗುತ್ತದೆ. ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮೊದಲು ಪ್ಯಾಕೇಟ್ ಕುಡಿಯುತ್ತಿದ್ದರು. ಆದ್ರೆ ಈಗ ಬಾಟಲ್​​ನಲ್ಲಿ ಕುಡಿಯುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ, ಪೊಲೀಸರು ಮತ್ತು ಗಣಿ ಭೂ ವಿಜ್ಞಾನ ಇಲಾಖೆಯವರು ಒಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

​ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಆಗ್ತಿದೆ, ಆದ್ರೆ ರಾಜ್ಯದ ಅಭಿವೃದ್ಧಿಗೆ ಹಣ ಬಿಡುಗಡೆ ಆಗ್ತಿಲ್ಲಾ. 6 ಕೋಟಿ ಅನುದಾನ ತರಲು 30 ಲಕ್ಷ ರೂ. ಪರ್ಸೆಂಟೇಜ್​ ಕೊಡಲಾಗಿದೆ. ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕರು ಕೂಡ 6 ಕೋಟಿ ಅನುದಾನ ತಂದು 30 ಲಕ್ಷ ಹಣ ಪರ್ಸೆಂಟೇಜ್ ಕೊಟ್ಟಿದ್ದಾರೆ ಎಂಬ ಆರೋಪ ಮಾಡಿದರು.

ಮುಖ್ಯವಾಗಿ ಕಾರಿನ ಚಾಲಕರೇ ಪರ್ಸೆಂಟೇಜ್ ವಸೂಲಿಗೆ ಇಳಿದಿದ್ದಾರೆ. ರಾಜ್ಯದಲ್ಲಿ ಭ್ರಷ್ಟರಿದ್ದಾರೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೀನಿ ಎಂದು ರಾಜ್ಯದ ಮುಖ್ಯಮಂತ್ರಿಯವರೆ ಹೇಳಿರುವಾಗ ನಾನೇನು ಮಾತಾಡಲಿ? ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದುಡ್ಡಿರುವವರ ಪಾಲಿಗೆ ಕಲ್ಯಾಣ ಕರ್ನಾಟಕ, ದುಡ್ಡಿಲ್ಲದವರ ಪಾಲಿಗೆ ಅನಾಥ ಕರ್ನಾಟಕವಾಗಿದೆ ಎಂದು ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.