ETV Bharat / state

ಶುಂಠಿ ಹೊಲದಲ್ಲಿ ಬೆಳೆದಿದ್ದ ಒಂದು ಕೆಜಿ ಅಕ್ರಮ ಗಾಂಜಾ ವಶಕ್ಕೆ

ಶುಂಠಿ ಬೆಳೆ ಮಧ್ಯೆ ಅಕ್ರಮವಾಗಿ ಬೆಳೆಸಿದ ಸುಮಾರು 10 ಸಾವಿರ ಮೌಲ್ಯದ 1 ಕೆಜಿ ಗಾಂಜಾ ಸೊಪ್ಪನ್ನು ಅಬಕಾರಿ ಉಪ ಅಧೀಕ್ಷಕರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ವಶ
ಗಾಂಜಾ ವಶ
author img

By

Published : Sep 15, 2020, 7:23 PM IST

ಹಾಸನ: ಶುಂಠಿ ಬೆಳೆಯ ನಡುವೆ ಬೆಳೆಸಲಾದ ಅಕ್ರಮ ಗಾಂಜಾ ಸೊಪ್ಪನ್ನು ಅಬಕಾರಿ ಉಪ ಅಧೀಕ್ಷಕರು ವಶಪಡಿಸಿಕೊಂಡಿದ್ದಾರೆ.​ ​ ​ ​

ಜಿಲ್ಲೆಯ ಸಾಲಗಾಮೆ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಚಿಕ್ಕೀರ ನಾಯ್ಕ್ ಎಂಬುವರಿಗೆ ಸೇರಿದ ಹೊಲದಲ್ಲಿ ಶುಂಠಿ ಬೆಳೆ ಮಧ್ಯೆ ಅಕ್ರಮವಾಗಿ ಬೆಳೆಸಿದ ಸುಮಾರು 10 ಸಾವಿರ ಮೌಲ್ಯದ 1 ಕೆಜಿ ಗಾಂಜಾ ಸೊಪ್ಪನ್ನು ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು, ಉಪವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಥಮ ವರ್ತಮಾನ ವರದಿಯಂತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದೇ ವೇಳೆ ಉಪ ಅಧೀಕ್ಷಕ ಎಂ.ಹೆಚ್.ರಘು, ಅಬಕಾರಿ ನಿರೀಕ್ಷಕಿ ಎ.ಎಸ್. ವಿದ್ಯಾ, ಆರಕ್ಷಕ ಉಪ ನಿರೀಕ್ಷಕಿ ಭಾರತೀ ರಾಯನಗೌಡ, ಅಬಕಾರಿ ರಕ್ಷಕ ಮಂಜುನಾಥ್, ಹೆಚ್.ಎಲ್. ಹನುಮಂತಯ್ಯ, ಜಯಶೀಲಾ ನಿಟ್ಟೂರು ಗ್ರಾಮ ಲೆಕ್ಕಿಗರಾದ ಪ್ರಕಾಶ್ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.