ETV Bharat / state

ಕಸಾಯಿಖಾನೆಗೆ ಸಾಗಿಸುತ್ತಿದ್ದ 120 ಪುಟ್ಟ ಕರುಗಳನ್ನು ರಕ್ಷಿಸಿದ ಸಂಘಟನೆ ಕಾರ್ಯಕರ್ತರು - ಗೋಹತ್ಯೆ ನಿಷೇಧ ಕಾಯಿದೆ ಜಾರಿ

ವಾರದ ಹಿಂದಷ್ಟೇ ಜನ್ಮ ತಳೆದಿದ್ದ ಪುಟ್ಟ ಕರುಗಳನ್ನು ರಕ್ಷಣೆ ಮಾಡಿರುವ ಸಂಘಟನೆಯೊಂದರ ಕಾರ್ಯಕರ್ತರು ಬಡಪಾಯಿ ಜೀವಗಳ ರಕ್ಷಣೆ ಮಾಡಿದ್ದಾರೆ.

ಹಾಸನ ಕರುಗಳ ರಕ್ಷಣೆ
author img

By

Published : Oct 5, 2019, 8:44 AM IST

ಹಾಸನ : ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರುಗಳನ್ನು ಸಂಘಟನೆಯೊಂದರ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಬಂಡಿಹಳ್ಳಿ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಖರೀದಿಸಿದ್ದ ಸುಮಾರು 120ಕ್ಕೂ ಅಧಿಕ ಎಳೆ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವ ವೇಳೆ ಖಚಿತ ಮಾಹಿತಿ ಮೇರೆಗೆ ಸಂಘಟನೆ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿದ್ದು, ಸದ್ಯ ಎಲ್ಲ ಕರುಗಳನ್ನು ಚನ್ನರಾಯಪಟ್ಟಣದ ಪೊಲೀಸ್ ಠಾಣೆಯ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ.

ಇಂದು ವಾರದ ಸಂತೆಯಾಗಿದ್ದರಿಂದ ಉಪಯೋಗಕ್ಕೆ ಬಾರದ ಗಂಡು ಸೀಮೆ ಹಸುಗಳ ಕರುಗಳನ್ನು ಕೆಲವು ರೈತರು ಹಣದ ಆಸೆಗೆ ಬಿದ್ದು ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೆಲ್ಲ ಕೆಲವು ಸಂಘಟನೆಗಳ ಮುಖಂಡರುಗಳು ಕೂಡ ಇಂತಹ ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಸಾಯಿಖಾನೆಗೆ ಸಾಗಿಸುತ್ತಿದ್ದ 120 ಪುಟ್ಟ ಕರುಗಳನ್ನು ರಕ್ಷಿಸಿದ ಸಂಘಟನೆಯೊಂದರ ಕಾರ್ಯಕರ್ತರು

ಕರುಗಳನ್ನು ಕರ್ನಾಟಕದಿಂದ ಕೇರಳಕ್ಕೆ ಸಾಗಿಸಲು ಮುಂದಾಗಿದ್ದ, ಸಂತಮ್ಮ ಕೃಪೆಯೆಂಬ ಟಾಟಾ ಏಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Intro:ಹಾಸನ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಕರುಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಬಂಡಿಹಳ್ಳಿ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಖರೀದಿಸಿದ್ದ ಸುಮಾರು 120ಕ್ಕೂ ಅಧಿಕ ಎಳೆ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವ ವೇಳೆ ಖಚಿತ ಮಾಹಿತಿ ಮೇರೆಗೆ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿದ್ದು ಸದ್ಯ ಎಲ್ಲ ಕರುಗಳನ್ನು ಚನ್ನರಾಯಪಟ್ಟಣದ ಪೊಲೀಸ್ ಠಾಣೆಯ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ.

ಇಂದು ವಾರದ ಸಂತೆಯಾಗಿದ್ದರಿಂದ ಉಪಯೋಗಕ್ಕೆ ಬಾರದ ಗಂಡು ಸೀಮೆ ಹಸುಗಳ ಕರುಗಳನ್ನು ಕೆಲವು ರೈತರು ಹಣದ ಆಸೆಗೆ ಬಿದ್ದು ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೆಲ್ಲ ಕೆಲವು ಸಂಘಟನೆಗಳ ಮುಖಂಡರುಗಳು ಕೂಡ ಇಂತಹ ಕೃತ್ಯಕ್ಕೆ ಸಾಥ್ ನೀಡಿ ಪುಟ್ಟ ಕರುಗಳನ್ನು ಹೊರರಾಜ್ಯಕ್ಕೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಇನ್ನು ಈ ಎಲ್ಲಾ ಕರುಗಳನ್ನು ಕರ್ನಾಟಕದಿಂದ ಕೇರಳಕ್ಕೆ ಸಾಧಿಸಲು ಮುಂದಾಗಿದ್ದ, ಸಂತಮ್ಮ ಕೃಪೆಯೆಂಬ ಟಾಟಾ ಏಸ್ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದು, ಈ ವೇಳೆ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಪ್ರಕರಣದ ಹಿಂದಿರುವ ಕಾಣದ ಕೈಗಳ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಳೆದೆರಡು ವಾರಗಳ ಹಿಂದಷ್ಟೇ ಸುಮಾರು 60ಕ್ಕೂ ಅಧಿಕ ಹಸು-ಕರುಗಳನ್ನು ಮಾರಾಟ ಮಾಡಲು ಮುಂದಾಗಿ ಇದೇ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದು, ಅಷ್ಟು ಕರುಗಳನ್ನು ಮೈಸೂರಿನ ಪಿಂಜರಾಪೋಲ್ ಗೋ-ಶಾಲೆಗೆ ಕಳುಹಿಸಿಕೊಡಲಾಗಿತ್ತು. ಇನ್ನೂ ಚಾಲಕ ಮತ್ತು ಕ್ಲೀನರ್ ವಿರುದ್ಧ ಚಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕೂಡ ಹಟ್ಟಿದ್ರು.

ದೇಶದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಬೇಕೆಂದು ಈಗಾಗಲೇ ಬಿಜೆಪಿ ಮುಂದಾಗಿದ್ದು ಅದಕ್ಕೆ ಪರ ಮತ್ತು ವಿರೋಧ ಚರ್ಚೆಗಳು ಕೂಡ ನಡೆಯುತ್ತಿವೆ. ಇದರ ಮಧ್ಯೆ ಈಗ ಮತ್ತೆ ಅಂತಹದೇ ದೊಡ್ಡ ಪ್ರಕರಣವೊಂದನ್ನು ಇದೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಹರ್ಷವರ್ಧನ್ , ಜಗದೀಶ್ , ಹರೀಶ, ಧನುಷ್ ದೀಲಿಪ್ ಮತ್ತು ಮುಂತಾದವರು ಬೇಧಿಸಿ, ಮಾಂಸಕ್ಕಾಗಿ ಬಲಿಯಾಗುತ್ತಿದ್ದ ವಾರದ ಹಿಂದಷ್ಟೇ ಜನ್ಮ ತಳೆದಿದ್ದ ಆ ಪುಟ್ಟ ಕರುಗಳನ್ನು ರಕ್ಷಣೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಇನ್ನು ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.